ಮಲಪ್ಪುರಂ: ತಾನೂರಿನಲ್ಲಿ ಹೈಯರ್ ಸೆಕೆಂಡರಿ ವಿಭಾಗದ ಪ್ರಶ್ನೆ ಪತ್ರಿಕೆ ಬದಲಾದ ಘಟನೆ ನಡೆದಿದೆ. ಹೊಸ ಯೋಜನೆಯಲ್ಲಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಿಗೆ ಹಳೆಯ ಯೋಜನೆಯ ಪ್ರಶ್ನೆ ಪತ್ರಿಕೆ ನೀಡಿ ಅವಾಂತರ ನಡೆದಿದೆ.
ದೇವದರ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಈ ಘಟನೆ ನಡೆದಿದೆ.ಪ್ರಶ್ನೆಪತ್ರಿಕೆ ಬದಲಿದ ಬಳಿಕ ಮತ್ತೆ ಮಕ್ಕಳನ್ನು ಪರೀಕ್ಷೆ ಬರೆಯುವಂತೆ ಮಾಡಿದ್ದಾರೆ.
ಗುರುವಾರದ ಹೈಯರ್ ಸೆಕೆಂಡರಿ ಗಣಿತ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಬದಲಾಗಿದೆ. ಪರೀಕ್ಷೆ ಮುಗಿದ ನಂತರವೇ ಬದಲಾದ ಪ್ರಶ್ನೆಪತ್ರಿಕೆ ಬಗ್ಗೆ ತಿಳಿಯಲಾಯಿತು. ಕೂಡಲೇ ಶಿಕ್ಷಕರು ಮಕ್ಕಳನ್ನು ವಾಪಸ್ ಕರೆಸಿ ಎರಡನೇ ಬಾರಿ ಪರೀಕ್ಷೆ ಬರೆಸಿದರು.