ತಿರುವನಂತಪುರಂ: ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪೋಲೀಸರು ಮುನ್ನೆಚ್ಚರಿಕೆ ವಹಿಸುತ್ತಿದ್ದಾರೆ. ಚುನಾವಣೆಗೆ ಸಂಬಂಧಿಸಿದಂತೆ ವಿವಿಧ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇಡಲು ವಿಶೇಷ ಪೋಲೀಸ್ ತಂಡವನ್ನು ನೇಮಿಸಲಾಗಿದೆ.
ರಾಜ್ಯ ಮಟ್ಟದಲ್ಲಿ ಹಾಗೂ ವಿವಿಧ ವ್ಯಾಪ್ತಿ ಹಾಗೂ ಜಿಲ್ಲೆಗಳಲ್ಲಿ ಪೋಲೀಸ್ ತಂಡವನ್ನು ನೇಮಿಸಲಾಗಿದೆ. ರಾಜ್ಯ ಪೆÇಲೀಸ್ ಮುಖ್ಯಸ್ಥ ಡಾ. ಶೇಖ್ ದರ್ವೇಶ್ ಸಾಹಿಬ್ ಸಾಮಾಜಿಕ ಮಾಧ್ಯಮ ಮೇಲ್ವಿಚಾರಣಾ ತಂಡವನ್ನು ನೇಮಿಸಿದ್ದಾರೆ.
ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೋಲೀಸರು ತಿಳಿಸಿದ್ದಾರೆ. ಈ ಬಗ್ಗೆ ಸಾರ್ವಜನಿಕರಿಗೂ ಮಾಹಿತಿ ನೀಡಬಹುದು. ವಾಟ್ಸಾಪ್ ಮೂಲಕವೂ ಸಂಪರ್ಕಿಸಬಹುದು ಎಂದು ಪೋಲೀಸ್ ಸಾಮಾಜಿಕ ಮಾಧ್ಯಮ ನಿಗಾ ತಂಡ ತಿಳಿಸಿದೆ. ತಿಳಿಸಬೇಕಾದ ವಾಟ್ಸಾಪ್ ಸಂಖ್ಯೆಗಳನ್ನು ಕೆಳಗೆ ನೀಡಲಾಗಿದೆ...
ಸೈಬರ್ ಹೆಡ್‍ಕ್ವಾರ್ಟರ್ಸ್ 9497942700, ತಿರುವನಂತಪುರಂ ನಗರ 9497942701, ತಿರುವನಂತಪುರಂ ಗ್ರಾಮಾಂತರ 9497942715, ಕೊಲ್ಲಂ ನಗರ 9497942702, ಕೊಲ್ಲಂ ಗ್ರಾಮಾಂತರ 9497942716, ಪತ್ತನಂತಿಟ್ಟ, ಆಲಪ್ಪುಳ 49749497497, ಕೋಟ್ಟಯಂ 949794 2705, ಇಡುಕ್ಕಿ 9497942706, ಎರ್ನಾಕುಳಂ ನಗರ 9497942707, ಎರ್ನಾಕುಳಂ ಗ್ರಾಮಾಂತರ 9497942717, ತ್ರಿಶೂರ್ ನಗರ 9497942708, ತ್ರಿಶೂರ್ ಗ್ರಾಮಾಂತರ 9497942718 , ಪಾಲಕ್ಕಾಡ್ 9497942709 , ಮಲಪ್ಪುರಂ 9497942710, ಕೋಝಿಕ್ಕೋಡ್ ನಗರ 9497942711, ಕೋಝಿಕ್ಕೋಡ್ ಗ್ರಾಮಾಂತರ 9497942719, ವಯನಾಡ್ 9497942712, ಕಣ್ಣೂರು ನಗರ 9497942713, ಕಣ್ಣೂರು ಗ್ರಾಮಾಂತರ, ಕಾಸರಗೋಡು 797942713, ತಿರುವನಂತಪುರಂ ರೇಂಜ್ 9497 942721, ಎರ್ನಾಕುಳಂ ರೇಂಜ್ 9497942722, ತ್ರಿಶೂರ್ ರೇಂಜ್ 9497942723, ಕಣ್ಣೂರು ರೇಂಜ್ 9497942724.