ಕಾಸರಗೊಡು : ದೇಶಾದ್ಯಂತ ರೈಲ್ವೆ ಇಲಾಖೆ ಅಧಿನದಲ್ಲಿ 85ಸಾವಿರ ಕೋಟಿ. ರೂ. ವೆಚ್ಚದ 6ಸಾವಿರಕ್ಕೂ ಹೆಚ್ಚು ಯೋಜನೆಗಳಿಗೆ ಪ್ರಧಾನಮಂತ್ರಿ ನರೇಂದ್ರಮೋದಿ ಮಂಗಳವಾರ ಆನ್‍ಲೈನ್ಮೂಲಕ ಚಾಲನೆ ನೀಡಿದರು. ಈ ಸಂದರ್ಭ ಕಾಸರಗೋಡು ರೈಲ್ವೆ ನಿಲ್ದಾಣದಲ್ಲಿ ನಡೆದ ಸಮಾರಂಭದಲ್ಲಿ ಕಾಸರಗೋಡು ರೈಲ್ವೆ ನಿಲ್ದಾಣ ಹಾಗೂ ಕಾಞಂಗಾಡು ರೈಲ್ವೆ ನಿಲ್ದಾಣದಲ್ಲಿ ತಲಾ ಒಂದು ಓಎಸ್‍ಓಪಿ ಸ್ಟಾಲ್‍ಗಳಿಗೂ ಚಾಲನೆ ನೀಡಲಾಯಿತು.
ಆನ್‍ಲೈನ್ ಮೂಲಕ ನಡೆದ ಸಮಾರಂಭದಲ್ಲಿ ಗುಜರಾತಿನ ಅಹಮ್ಮದಾಬಾದಿನಿಂದ ಪ್ರಧಾನಿ ನರೇಂದ್ರ ಮೋದಿ ಯೋಜನೆಗಳಿಗೆ ಚಾಲನೆ ನೀಡಿದರು. ಕಾಸರಗೋಡು ನಿಲ್ದಾಣದಲ್ಲಿ ನಡೆದ ಸಮಾರಂಭದಲ್ಲಿ ಹೊಸದುರ್ಗ ಶಾಸಕ ಇ. ಚಂದ್ರಶೇಖರನ್ ಅತಿಥಿಯಾಗಿ ಭಾಗವಹಿಸಿದ್ದರು. ಕಾಸರಗೋಡು ಶಾಸಕ ಎನ್.ಎ ನೆಲ್ಲಿಕುನ್ನು ಹಾಗೂ ಕಾಸರಗೋಡು ನಗರಸಭಾ ಅಧ್ಯಕ್ಷ ಅಬ್ಬಾಸ್ ಬೀಗಂ ನೂತನ ಮಳಿಗೆಗಳ ಶಿಲಾಫಲಕ ಅನಾವರಣಗೊಳಿಸಿದರು. ಪಾಲಕ್ಕಾಡ್ ವಿಭಾಗದ ಇತರ ಯೋಜನೆಗಳನ್ನೂ ಪ್ರಧಾನಮಂತ್ರಿಯವರು ರಾಷ್ಟ್ರಕ್ಕೆ ಸಮರ್ಪಿಸಿದರು.