ಕಾಸರಗೋಡು: ಎನ್‍ಜಿಓ ಸಂಘ್ ಕಾಸರಗೋಡು ಜಿಲ್ಲಾ ಸಮ್ಮೇಳನ ಮುನ್ಸಿಪಲ್ ವನಿತಾ ಭವನ ಸಭಾಂಗಣ ಜರುಗಿತು. ಸಂಘಟನೆ ರಾಜ್ಯ ಕಾರ್ಯದರ್ಶಿ ಎ. ಇ. ಸಂತೋಷ್ ಸಮಾರಂಭ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ಕೆ. ರಂಜಿತ್ ಅಧ್ಯಕ್ಷತೆ ವಹಿಸಿದ್ದರು. 'ತಪಸ್ಯ'ರಾಜ್ಯ ಸಮಿತಿ ಸದಸ್ಯ ಪ್ರಶಾಂತ್ ಬಾಬು ಕೈತಪ್ರಂ ದಿಕ್ಸೂಚಿ ಭಾಷಣ ಮಾಡಿದರು. ಬಿಎಂಎಸ್ ಜಿಲ್ಲಾ ಕಾರ್ಯದರ್ಶಿ ಕೆ. ವಿ. ಬಾಬು, ಪಿಂಚಣಿದಾರರ ಸಂಘದ ಜಿಲ್ಲಾ ಉಪಾಧ್ಯಕ್ಷ ಕೇಶವ ಭಟ್, ಎನ್‍ಟಿಯು ಜಿಲ್ಲಾಧ್ಯಕ್ಷ ಟಿ.ಕೃಷ್ಣನ್, ಎಬಿವಿಪಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎಂ. ಆರ್ಯಲಕ್ಷ್ಮಿ ಉಪಸ್ಥಿತರಿದ್ದರು.
ಎನ್‍ಜಿಒ ಸಂಘದ ಜಿಲ್ಲಾ ಕಾರ್ಯದರ್ಶಿ ವಿ. ಶ್ಯಾಮ್ ಪ್ರಸಾದ್ ಸ್ವಾಗತಿಸಿದರು. ಜಿಲ್ಲಾ ಜತೆ ಕಾರ್ಯದರ್ಶಿ ಎ. ರವಿಕುಮಾರ್ ವಂದಿಸಿದರು. ಕಾರ್ಯಕ್ರಮದ ಅಂಗವಾಗಿ ಬೀಳ್ಕೊಡುಗೆ ಸಮಾರಂಭ, ಸಂಘಟನೆ ಚರ್ಚೆ, ಚಟುವಟಿಕೆ ವರದಿ, ಆದಾಯ-ವೆಚ್ಚದ ಲೆಕ್ಕಾಚಾರ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಸಮಾರೋಪ ಸಮಾರಂಭದಲ್ಲಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಪಿ. ಪೀತಾಂಬರನ್ ಪ್ರಧಾನ ಭಾಷಣ ಮಾಡಿದರು.