ಕಾಸರಗೋಡು : ಲೊಕಸಭಾ ಕ್ಷೇತ್ರ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕೆ. ಇನ್‍ಬಾಶೇಖರ್ ಅವರು ಮತ ಯಂತ್ರ ವಿತರಣಾ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ಸಜ್ಜೀಕರಣಗಳ ಬಗ್ಗೆ ಅವಲೋಕನ ನಡೆಸಿದರು. ಮಂಜೇಶ್ವರಂ ಕ್ಷೇತ್ರದ ಕುಂಬಳೆ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ, ಕಾಸರಗೋಡು ಕ್ಷೇತ್ರದಲ್ಲಿ ಕಾಸರಗೋಡು ಸರ್ಕಾರಿ ಕಾಲೇಜು, ಉದುಮ ಕ್ಷೇತ್ರದ ಚೆಮ್ನಾಡ್ ಜಮಾ ಅತ್ ಹೈಯರ್ ಸೆಕೆಂಡರಿ ಶಾಲೆ, ಕಾಞಂಗಾಡು ಕ್ಷೇತ್ರದಲ್ಲಿ ದುರ್ಗಾ ಹೈಯರ್ ಸೆಕೆಂಡರಿ ಶಾಲೆ, ತ್ರಿಕರಿಪುರ ಮಂಡಲದ ಸ್ವಾಮಿ ನಿತ್ಯಾನಂದ ಆಂಗ್ಲ ಮಾಧ್ಯಮ ಶಾಲೆಗೆ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲಿಸಿದರು. ಪಯ್ಯನ್ನೂರು ಮಂಡಲದ ಕುಞÂರಾಮನ್ ಅಡಿಯೋಡಿ ಸ್ಮಾರಕ ಜಿವಿಎಚ್‍ಎಸ್‍ಎಸ್ ಪಯ್ಯನ್ನೂರು ಮತ್ತು ಮಟಾಯಿ ಸರ್ಕಾರಿ: ಗಲ್ರ್ಸ್ ಹೈಯರ್ ಸೆಕೆಂಡರಿ ಶಾಲೆ, ಕಲ್ಯಾಶ್ಯೇರಿ ಮಂಡಲದ ಮಾಡಾಯಿ ಹೆಣ್ಮಕ್ಕಳ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಗೆ ಕಾಸರಗೋಡು ಜಿಲ್ಲಾಧಿಕಾರಿ ಕೆ. ಇನ್‍ಬಾಶೇಖರ್ ಮತ್ತು ಕಣ್ಣೂರು ಜಿಲ್ಲಾಧಿಕಾರಿ ಅರುಣ್‍ಕೆ. ವಿಜಯನ್ ಜಂಟಿ ಪರಿಶೀಲನೆ ನಡೆಸಿದರು. ಸಹಾಯಕ ಚುನಾವಣಾಧಿಕಾರಿಗಳಾದ ಜೆಗ್ಗಿ ಪಾಲ್, ಪಿ. ಬಿನುಮೋನ್, ನಿರ್ಮಲ್ ರೀಟಾ ಗೋಮ್ಸ್, ಸುಫಿಯಾನ್ ಅಹಮದ್, ಪಿ. ಶಾಜು, ಸಿರೋಶ್ ಪಿ.ಜಾನ್, ಕೆ. ಅಜಿತ್ ಕುಮಾರ್ ಉಪಸ್ಥಿತರಿದ್ದರು.