ಕುಂಬಳೆ: ಅಂಗಡಿಮೊಗರು ಸಮೀಪದ ದೇಲಂಪಾಡಿ ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಶಿವರಾತ್ರಿ ಮಹೋತ್ಸವ ಮಾ. 7ರಿಂದ 9ರ ವರೆಗೆ ಜರುಗಲಿದೆ. ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ. 7ರಂದು ಬೆಳಗ್ಗೆ 7ಕ್ಕೆ ಪ್ರಾರ್ಥನೆ,ಗಣಪತಿ ಹೋಮ,ಮಧ್ಯಾಹ್ನ 3 ಗಂಟೆಯಿಂದ ಹಸಿರುವಾಣಿ ಹೊರೆ ಕಾಣಿಕೆ ಮೆರವಣಿಗೆ, ಸಂಜೆ 7ರಿಂದ ಸ್ಥಳೀಯ ಪ್ರತಿಭಟಗಳಿಂದ ಸಾಂಸ್ಕøತಿಕ ವೈವಿಧ್ಯ, ರಾತ್ರಿ 8ಕ್ಕೆ ಅತ್ತಾಳ ಪೂಜೆ,8.30ರಿಂದ ಕ್ಷೇತ್ರ ಆಡಳಿತ ಮೊಕ್ತೇಸರ ವಕೀಲ ಬಿ.ಸುಬ್ಬಯ್ಯ ರೈ ಅವರ ಆಧ್ಯಕ್ಷತೆಯಲ್ಲಿ ಜರಗುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಉದ್ಯಮಿ,ದಾನಿ ಕುಳೂರು ಕನ್ಯಾನ ಸದಾಶಿವ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ರಾಜರಾಮ ರಾವ್ ಧಾರ್ಮಿಕ ಭಾಷಣಗೈಯುವರು. ರಾತ್ರಿ11ರಿಂದ ನವಚೇತನ ಯೂತ್ ಕ್ಲಬ್ ಬಾಡೂರು ಇವರಿಂದ "ಕಾಸ್ ದ ಕಸರತ್ತ್" ತುಳು ನಾಟಕ ಪ್ರದರ್ಶನಗೊಳ್ಳಲಿದೆ. ಮಾ.8ಕ್ಕೆ ಬೆಳಗ್ಗೆ6ರಿಂದ ರುದ್ರಾಭಿಷೇಕ,9.30ರಿಂದ ಭಜನೆ, 11 ಗಂಟೆಗೆ ನವಕಾಭಿಷೇಕ,ಮಧ್ಯಾಹ್ನ 12ಕ್ಕೆ ಮಹಾಪೂಜೆ, ಸಂಜೆ 6.30ರಿಂದ ದೀಪಾರಾಧನೆ,7.30ರಿಂದ ಕ್ಷೇತ್ರ ಮಹಿಳಾ ಸಮಿತಿ ಸದಸ್ಯೆಯರಿಂದ ಮೆಗಾ ತಿರುವಾದಿರ, ರಾತ್ರಿ ಗಂಟೆ 8.ಕ್ಕೆ ಮಹಾಪೂಜೆ, 8.30ರಿಂದ ದೇವರ ರಾಜಾಂಗಣ ಪ್ರವೇಶ, ನೃತ್ಯ ಬಲಿ, ಸುಡುಮದ್ದು ಪ್ರದರ್ಶನ,ಮಾ.9ಕ್ಕೆ ಬೆಳಗ್ಗೆ 9.30 ಗಂಟೆಯಿಂದ ಶ್ರೀದೇವರ ರಾಜಾಂಗಣ ಪ್ರವೇಶ, ದರ್ಶನ ಬಲಿ, ರಾಜಾಂಗಣ ಪ್ರಸಾದ,ಮಧ್ಯಾಹ್ನ 12.30ರಿಂದ ಪರಿವಾರ ದೈವಗಳಿಗೆ ತಂಬಿಲ,ಮಂತ್ರಾಕ್ಷತೆಯೊಂದಿಗೆ ಉತ್ಸವ ಸಂಪನ್ನಗೊಳ್ಳಲಿದೆ.