ಅಗರ್ತಲಾ: ಭಾರತದ ಗಡಿಯೊಳಗೆ ನುಸುಳುತ್ತಿದ್ದ ಬಾಂಗ್ಲಾ ಕಳ್ಳಸಾಗಣೆದಾರನನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಹತ್ಯೆ ಮಾಡಿರುವ ಘಟನೆ ಭಾನುವಾರ ತ್ರಿಪುರಾದ ಉನಾಕೋಟಿ ಜಿಲ್ಲೆಯಲ್ಲಿ ನಡೆದಿದೆ.
ಅಗರ್ತಲಾ: ಭಾರತದ ಗಡಿಯೊಳಗೆ ನುಸುಳುತ್ತಿದ್ದ ಬಾಂಗ್ಲಾ ಕಳ್ಳಸಾಗಣೆದಾರನನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಹತ್ಯೆ ಮಾಡಿರುವ ಘಟನೆ ಭಾನುವಾರ ತ್ರಿಪುರಾದ ಉನಾಕೋಟಿ ಜಿಲ್ಲೆಯಲ್ಲಿ ನಡೆದಿದೆ.
ಸುಮಾರು 15ರಿಂದ 20 ಜನರಿದ್ದ ಕಳ್ಳ ಸಾಗಣೆದಾರರ ತಂಡವೊಂದು ಬಿಎಸ್‌ಎಫ್ ಕಣ್ಗಾವಲಿನ ಕೈಲಾಸ್‌ಹರ್ ಪ್ರದೇಶದ ಮಾಂಗ್ರೋಳಿ ಬಳಿ ತಂತಿ ಬೇಲಿಯನ್ನು ದಾಟುವ ಪ್ರಯತ್ನ ಮಾಡುತ್ತಿತ್ತು.
ತಕ್ಷಣವೇ ಕಾರ್ಯಪೃವೃತ್ತರಾದ ಬಿಎಸ್‌ಎಫ್ ಸಿಬ್ಬಂದಿ ಅವರಿಗೆ ಎಚ್ಚರಿಕೆ ನೀಡಿದ್ದರು. ಆದರೂ ಅನುಮಾನಾಸ್ಪದ ವಸ್ತುಗಳೊಡನೆ ಗಡಿ ನುಸುಳಲು ಯತ್ನಿಸಿದ್ದಲ್ಲದೇ ಬಿಎಸ್‌ಎಫ್ ಸಿಬ್ಬಂದಿಯ ಮೇಲೆ ಕಳ್ಳ ಸಾಗಣೆದಾರರು ಹಲ್ಲೆಗೆ ಯತ್ನಿಸಲು ಮುಂದಾಗಿದ್ದರು. ಈ ವೇಳೆ ಯೋಧರೊಬ್ಬರು ಹಾರಿಸಿದ ಗುಂಡಿಗೆ ಬಾಂಗ್ಲಾದೇಶದ ಮೌಲ್ವಿಬಜಾರ್ ಜಿಲ್ಲೆಯ ಸದ್ದಾಂ ಹುಸೇನಿ (23) ಎಂಬುವ ಮೃತಪಟ್ಟಿದ್ದಾನೆ.
ಘಟನೆಯಲ್ಲಿ ಬಿಎಸ್‌ಎಫ್ ಯೋಧರೊಬ್ಬರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಬಿಎಸ್‌ಎಫ್ ಅಧಿಕಾರಿಗಳು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.