ಮಧೂರು: ಪರಕ್ಕಿಲ ಶ್ರೀ ಮಹಾದೇವ ಶಾಸ್ತಾ ವಿನಾಯಕ ಕ್ಷೇತ್ರದಲ್ಲಿ ಮಾರ್ಚ್ 8 ರಂದು ಶಿವರಾತ್ರಿ ಮಹೋತ್ಸವವು ವಿವಿಧ ಕಾರ್ಯಕ್ರಮಗಳೊಂದಿಗೆ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರರ ಮುಖ್ಯ ನೇತ್ರತ್ವದಲ್ಲಿ ವಿಜೃಂಭಣೆಯಿಂದ ನಡೆಯಿತು.
ಕ್ಷೇತ್ರದಲ್ಲಿ ಬೆಳಿಗ್ಗೆ ಉμÁ ಪೂಜೆ, ಗಣಪತಿ ಹೋಮ, ರುದ್ರಾಭಿμÉೀಕ, ನವಕಾಭಿμÉೀಕ, ಭಜನೆ, ಮಧ್ಯಾಹ್ನ ಮಹಾಪೂಜೆ, ಉತ್ಸವ ಬಲಿ ನಡೆಯಿತು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಅಮೃತ ಕಲಾಕ್ಷೇತ್ರ ಕೂಡ್ಲು ಇವರಿಂದ 'ಶಾಸ್ತ್ರೀಯ ನೃತ್ಯ' ಕಾರ್ಯಕ್ರಮ, ತರುಣ ಕಲಾವೃಂದ, ಕುಟುಂಬಶ್ರೀ ಪರಕ್ಕಿಲ ಇವರ ಸಹಕಾರದೊಂದಿಗೆ ಮಹಾದೇವ ಬಾಲಗೋಕುಲ ವಿದ್ಯಾರ್ಥಿಗಳ ನೃತ್ಯ ಕಾರ್ಯಕ್ರಮ, ಧನ್ಯಾ ಮುರಳಿ ಅಸ್ರ ಇವರಿಂದ ಭರತನಾಟ್ಯ ನೃತ್ಯ ಕೀರ್ತನ ಪ್ರದರ್ಶನ ಬಳಿಕ ದೇವರ ಉತ್ಸವ ಬಲಿಯು ಶ್ರೀ ಧನ್ವಂತರಿ ಸನ್ನಿಧಿಗೆ ತೆರಳಿ, ಹಿಂತಿರುಗಿ ಬಂದು ಪರಕ್ಕಿಲ ಬೇಡಿ ಕಟ್ಟೆಯಲ್ಲಿ ಸಿಡಿಮದ್ದು ಪ್ರದರ್ಶನ, ರಾಜಾಂಗಣ ಪ್ರಸಾದ ಮತ್ತು ಶ್ರೀ ಶಾಸ್ತಾ ಪಾಟ್ ಉತ್ಸವದೊಂದಿಗೆ ಸಂಪನ್ನಗೊಂಡಿತು.