ಬದಿಯಡ್ಕ : ಉಬ್ರಂಗಳದ ವೀಣಾವಾದಿನಿ ಸಂಗೀತ ವಿದ್ಯಾಪೀಠಂ ಸಂಸ್ಥೆಯ ಆಶ್ರಯದಲ್ಲಿ ಪುಳಿತ್ತಡಿಯ ಬಳ್ಳಪದವು ನಾರಾಯಣೀಯಂ ಸಂಗೀತ ಶಾಲೆಯಲ್ಲಿ ಮಹಾಶಿವರಾತ್ರಿಯ ಅಂಗವಾಗಿ ಮಾ.8ರಂದು ಸಂಹೆ 4ರಿಂದ ಶನಿವಾರ ಬೆಳಗ್ಗೆ 7ರ ತನಕ 'ಅಖಂಡ ಶಿವ ಸಂಗೀತ ಸ್ಮರಣಂ' ಎಂಬ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಭದ್ರದೀಪಂ ಕಾರ್ಯಕ್ರಮವು ಸಂಜೆ 4 ಗಂಟೆಗೆ ಬ್ರಹ್ಮಶ್ರೀ ಮಲ್ಲಿಯೂರು ದಿವಾಕರನ್ ನಂಬೂದರಿ, ಎಚ್ ಎಸ್ ಭಟ್ ಕಾಂಞಂಗಾಡು, ಶಂಕರರಾಜ್ ಆಲಂಪಾಡಿ, ಶಿವಪ್ಪ ಟಿ, ಪಡುಮಲೆ ಶ್ರೀನಿವಾಸ ಭಟ್, ಪಡುಮಲೆ ಮನೋಹರ ಪ್ರಸಾದ್ ಅವರ ಉಪಸ್ಥಿತಿಯಲ್ಲಿ ಆರಂಭವಾಗಲಿದೆ. ಸಂಜೆ 4.45ರಿಂದ ಸಂಗೀತ ಸ್ಮರಣಂ ಆರಂಭವಾಗಲಿದೆ. ರಾತ್ರಿ 7.55ಕ್ಕೆ ಮಹಾಶಿವ ಪೂಜೆ ನಡೆಯಲಿದೆ. ಹಿಮ್ಮೇಳದಲ್ಲಿ ಸಂಗೀತ ಕಲಾವಿದರಾದ ವೇಣುಗೋಪಾಲ ಶ್ಯಾನುಬೋಗ್, ತಿರುನೆಲ್ಲೂರು ಅಜಿತ್, ಪ್ರಭಾಕರ ಕುಂಜಾರು, ಧನಶ್ರೀ ಶಬರಾಯ, ಚೇರ್ತಲ ಜಿ ಕೃಷ್ಣ ಕುಮಾರ್, ಕಲ್ಲಕುಳಂಗರ ಉಣ್ಣಿಕೃಷ್ಣನ್, ಬಡ್ಕೆಕೆರೆ ಶ್ರೀಧರ ಭಟ್, ಶಿನು ಗೋಪೀನಾಥ್ ಕೊಟ್ಟಾಯಂ, ರತ್ನಶ್ರೀ ಐಯ್ಯರ್ ವೈಕಂ ಮೊದಲಾದವರು ಭಾಗವಹಿಸಲಿದ್ದಾರೆ. ನಂತರ ಸಂಸ್ಥೆಯ ವಿದ್ಯಾರ್ಥಿಗಳಿಂದ ಹಾಗೂ ಅತಿಥಿ ಕಲಾವಿದರಿಂದ ಅಖಂಡ ಶಿವ ಸಂಗೀತ ಸ್ಮರಣಂ ಕಾರ್ಯಕ್ರಮ ನಡೆಯಲಿದೆ ಎಂದು ಸಂಸ್ಥೆಯ ಮುಖ್ಯಸ್ಥರಾದ ವಿದ್ವಾನ್ ಯೋಗೀಶ್ ಶರ್ಮ ಬಳ್ಳಪದವು ತಿಳಿಸಿದ್ದಾರೆ.