ಕುಂಬಳೆ: ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‍ನಲ್ಲಿ ಸೇರ್ಪಡೆಗೊಂಡ ಪುತ್ತಿಗೆ ಗ್ರಾಮ ಪಂಚಾಯತಿ ಅಂಗಡಿಮೊಗರು ಕುಟುಂಬ ಆರೋಗ್ಯ ಕೇಂದ್ರದ ನೂತನ ಕಟ್ಟಡವನ್ನು ರಾಜ್ಯ ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ವೀಣಾ ಜಾರ್ಜ್ ಸೋಮವಾರ ಆನ್ ಲೈನ್ ಮೂಲಕ ಉದ್ಘಾಟಿಸಿದರು. ಶಾಸಕ ಎ.ಕೆ.ಎಂ.ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು.
ಪುತ್ತಿಗೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಜಯಂತಿ ಗಣೇಶ್, ಜಿಲ್ಲಾ ಪಂಚಾಯಿತಿ ಸದಸ್ಯ ನಾರಾಯಣ ನಾಯ್ಕ್, ಪುತ್ತಿಗೆ ಗ್ರಾಮ ಪಂಚಾಯಿತಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಚ್.ಅಬ್ದುಲ್ ಮಜೀದ್, ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಪಾಲಾಕ್ಷ ರೈ, ಕ್ಷೇಮಾಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಎಂ.ಅನಿತಾ, ಬ್ಲಾಕ್ ಪಂಚಾಯಿತಿ ಸದಸ್ಯೆ ಎಂ.ಚಂದ್ರಾವತಿ, ಪುತ್ತಿಗೆ ಗ್ರಾ.ಪಂ. ಪಂಚಾಯಿತಿ ಸದಸ್ಯರಾದ ಗಂಗಾಧರ, ವೈ.ಶಾಂತಿ, ಆಸಿಫ್ ಅಲಿ, ಕಾವ್ಯಶ್ರೀ, ಜನಾರ್ದನ ಪೂಜಾರಿ, ಅನಿತಾಶ್ರೀ, ಜಯಂತಿ ಮುಕಾರಿಕಂಡ, ಎಸ್.ಆರ್.ಕೇಶವ, ಪ್ರೇಮಾ ಎಸ್.ರೈ, ಪುತ್ತಿಗೆ ಎಫ್ ಎಚ್ ಸಿ ವೈದ್ಯಾಧಿಕಾರಿ ಸಿ.ಎಚ್.ಗೋಪಾಲಕೃಷ್ಣ, ಪುತ್ತಿಗೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಜೆ.ಅರುಣ, ಪ್ರಭಾರ ಕಾರ್ಯದರ್ಶಿ ಎಂ.ಪಿ. ನೌಷಾದಲಿ, ಪಿ. ಇಬ್ರಾಹಿಂ ಕಟ್ಟತ್ತಡ್ಕ, ಮನು ಪುತ್ತಿಗೆ, ಅಬ್ದುಲ್ಲ ಕಂಡತ್ತಿಲ್, ಸುಲೈಮಾನ್ ಊಜಂಪದವು ಮತ್ತು ಎಸ್.ನಾರಾಯಣ ಮುಗು ಮಾತನಾಡಿದರು. ಪುತ್ತಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಬ್ಬಣ್ಣ ಆಳ್ವ ಸ್ವಾಗತಿಸಿ, ಅಂಗಡಿಮೊಗರು ಎಫ್‍ಎಚ್‍ಸಿ ವೈದ್ಯಾಧಿಕಾರಿ ಎಂ.ಎನ್.ಸಂಧ್ಯಾ ವಂದಿಸಿದರು.