ಕಾಸರಗೋಡು: ವಾಹನ ಚಾಲನಾ ತರಬೇತಿ ಶಾಲಾ ವಲಯವನ್ನು ದಮನಿಸುವ ರೀತಿಯಲ್ಲಿ ರಾಜ್ಯ ಸಾರಿಗೆ ಸಚಿವರ ಧೋರಣೆ ಖಂಡಿಸಿ ಡ್ರೈವಿಂಗ್ ಸ್ಕೂಲ್ ಮಾಲೀಕರ ಸಮಿತಿ ವತಿಯಿಂದ ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಯಿತು.
ಸ್ವ ಉದ್ಯೋಗ ನಡೆಸುತ್ತಿರುವ ಡ್ರೈವಿಂಗ್ ಸ್ಕೂಲ್ ಕ್ಷೇತ್ರವನ್ನು ಏಕಸ್ವಾಮ್ಯ ಹೊಂದಿರುವ ದೈತ್ಯ ಕಾಪೆರ್Çರೇಟ್‍ಗಳು ಮತ್ತು ನಿವೃತ್ತ ಅಧಿಕಾರಿಶಾಹಿಗಳ ಕೈಗಿತ್ತು ಈ ವಲಯವನ್ನು ದಮನಿಸುವ ಸಾರಿಗೆ ಸಚಿವರು ತಮ್ಮ ತಪ್ಪು ನಿಧಾಋದಿಂದ ಹಿಂದೆ ಸರಿಯುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು. ದುರಾಡಳಿತದಿಂದ ನಲುಗುತ್ತಿರುವ ಕೆಎಸ್‍ಆರ್‍ಟಿಸಿಯಲ್ಲಿ ವೇತನ, ಪಿಂಚಣಿ ನೀಡದೆ ಸಿಬ್ಬಂದಿ ಆತ್ಮಹತ್ಯೆ ಹಾದಿ ಹಿಡಿಯುತ್ತಿದ್ದರೆ, ನೌಕರರಿಗೆ ವೇತನ, ಪಿಂಚಣಿ ನೀಡುವ ಯೋಜನೆಗೆ ಸಚಿವರು ಮಹತ್ವ ನೀಡುವುದರ ಬದಲು ವಾಹನಚಾಲನಾ ತರಬೇತಿ ಕೇಂದ್ರಗಳನ್ನು ಬುಡಮೇಲುಗೊಳಿಸಲು ಯತ್ನಿಸುತ್ತಿರುವುದು ಖಂಡನೀಯ ಎಂದು ತಿಳಿಸಿದರು. ಸಂಘಟನೆ ಪದಾಧಿಕಾರಿಗಳಾದ ಟಿ.ವಿ.ಬಾಲನ್, ಮುಖಂಡರಾದ ಇ.ಮೋಹನನ್ , ಅಬ್ದುಲ್ ರಹಮಾನ್, ರಶೀದ್ ನೇತೃತ್ವ ವಹಿಸಿದ್ದರು.