ಕುಂಬಳೆ: ಮೀನುಗಾರರಿಗೆ ‘ಸುಸ್ಥಿರ ಮೀನುಗಾರಿಕೆ ಪದ್ಧತಿ’ ಕುರಿತು ಜಾಗೃತಿ ತರಗತಿ ಏರ್ಪಡಿಸಲಾಗಿತ್ತು. ಕುಂಬಳೆ ಮತ್ಸ್ಯ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ಕುಂಬಳೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಯು.ಪಿ.ತಾಹಿರಾ ಯೂಸುಫ್ ಉದ್ಘಾಟಿಸಿದರು. ಕುಂಬಳೆ ಗ್ರಾಮ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಸಬೂರ, ವಾರ್ಡ್ ಸದಸ್ಯ ಕೌಲತ್ ಮಾತನಾಡಿದರು.
ಸುಮಾರು 100 ಮೀನುಗಾರರು ಜಾಗೃತಿ ತರಗತಿಯಲ್ಲಿ ಭಾಗವಹಿಸಿದ್ದರು. ಕುಂಬಳೆ ಮತ್ಸ್ಯ ಭವನದ ಅಧಿಕಾರಿಗಳಾದ ಶಿನಾಸ್ ಮತ್ತು ಜಿಜೋಮೋನ್, ಕುಂಬಳೆ ಮತ್ಸ್ಯ ಭವನದ ಕಚೇರಿ ಸಿಬ್ಬಂದಿ ಜೋಸ್.ಟಿ.ಜಾರ್ಜ್ ಮತ್ತು ದೀಕ್ಷಿತಾ ತರಗತಿಗಳನ್ನು ನಡೆಸಿಕೊಟ್ಟರು.