ನವದೆಹಲಿ: ಈಚೆಗಿನ ದಿನಗಳಲ್ಲಿ ಜನಪ್ರಿಯತೆ ಪಡೆದ ಕ್ರೀಡೆಗಳನ್ನು ಸೇರಿಸಿಕೊಳ್ಳಲು ಮತ್ತು ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲು, ಕೇಂದ್ರ ಸರ್ಕಾರವು ಕ್ರೀಡಾ ಕೋಟಾದಡಿ ನೇಮಕಾತಿ ಮತ್ತು ಬಡ್ತಿಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಪರಿಷ್ಕರಿಸಿದೆ.

'ಕೇಂದ್ರ ಕ್ರೀಡಾ ಸಚಿವಾಲಯದ ಜತೆಗೆ ಸಮಾಲೋಚನೆ ನಡೆಸಿ ಮಾರ್ಗಸೂಚಿಗಳನ್ನು ಪರಿಷ್ಕರಿಸಲಾಗಿದೆ.
'ಮಾನ್ಯತೆ ಹೊಂದಿರುವ ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳು ವೈಯಕ್ತಿಕ ಕ್ರೀಡೆಗಳಲ್ಲಿ ಆಯೋಜಿಸುವ ಚಾಂಪಿಯನ್‌ಷಿಪ್‌ಗಳು ಮತ್ತು ಟೂರ್ನಿಗಳು, ಭಾರತ ಒಲಿಂಪಿಕ್ ಸಂಸ್ಥೆ ಏರ್ಪಡಿಸುವ ರಾಷ್ಟ್ರೀಯ ಕ್ರೀಡಾಕೂಟ, ಖೇಲೊ ಇಂಡಿಯಾ ಯೂನಿವರ್ಸಿಟಿ ಗೇಮ್ಸ್, ಖೇಲೊ ಇಂಡಿಯಾ ಯೂತ್ ಗೇಮ್ಸ್, ಖೇಲೊ ಇಂಡಿಯಾ ಚಳಿಗಾಲದ ಕ್ರೀಡಾಕೂಟ ಮತ್ತು ಖೇಲೊ ಇಂಡಿಯಾ ಪ್ಯಾರಾ ಕ್ರೀಡಾಕೂಟಗಳನ್ನು ಪರಿಗಣಿಸಲಾಗುವುದು' ಎಂದು ತಿಳಿಸಿದೆ.
'ಚೆಸ್‌ನಲ್ಲಿ ಗ್ರ್ಯಾಂಡ್ ಮಾಸ್ಟರ್ (ಜಿಎಂ), ಇಂಟರ್‌ನ್ಯಾಷನಲ್ ಮಾಸ್ಟರ್ (ಐಎಂ) ಎನಿಸಿಕೊಂಡವರು ಮತ್ತು ಚೆಸ್ ಒಲಿಂಪಿಯಾಡ್‌ನಲ್ಲಿ ಪಾಲ್ಗೊಂಡವರಿಗೆ ಆದ್ಯತೆ ನೀಡಲಾಗುವುದು. ರಾಷ್ಟ್ರೀಯ ಓಪನ್ ಚೆಸ್ ಚಾಂಪಿಯನ್‌ಷಿಪ್‌ಅನ್ನು ರಾಷ್ಟ್ರೀಯ ಚಾಂಪಿಯನ್‌ಷಿಪ್ ಎಂದು ಪರಿಗಣಿಸಲಾಗುತ್ತದೆ. ರಾಷ್ಟ್ರೀಯ ತಂಡ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆದ್ದವರನ್ನೂ ನೇಮಕಾತಿಗೆ ಪರಿಗಣಿಸಲಾಗುತ್ತದೆ' ಎಂದು ಆದೇಶದಲ್ಲಿ ತಿಳಿಸಿದೆ.