ತಿರುವನಂತಪುರ: ಕೇರಳ ವಿಶ್ವವಿದ್ಯಾನಿಲಯದ ಕಲಾ ಉತ್ಸವದ ಹೆಸರನ್ನು ಇಂತಿಹಾದ್ ಎಂದು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಟೀಕಿಸಿದ್ದಾರೆ.
ರಾಜ್ಯಪಾಲರು ಇಂತಿಹಾದ್ ಪದದ ಅರ್ಥ ತಿಳಿದಿದೆಯೇ ಮತ್ತು ಹಿಂಸಾಚಾರ ಎಂಬ ಪದವನ್ನು ಹಬ್ಬಕ್ಕೆ ಬಳಸಬಹುದೇ ಎಂದು ಕೇಳಿರುವರು. ಮಕ್ಕಳ ಯುವಜನೋತ್ಸವಕ್ಕೆ ಹಿಂಸೆಯನ್ನು ಉತ್ತೇಜಿಸುವ ಹೆಸರನ್ನು ಇಡಬೇಕೇ? ಇಂತಿಹಾದ್ ಪದದ ನಿಘಂಟಿನ ವ್ಯಾಖ್ಯಾನವು ಬಂಡಾಯದಿಂದ ವಿರೋಧಿಸುವುದು. ಶಾಂತಿಯುತ ವಾತಾವರಣದಲ್ಲಿ ಆಚರಣೆ ನಡೆಯಬೇಕು ಎಂದರು.
ಮೊನ್ನೆಯಷ್ಟೇ ಉಪಕುಲಪತಿಗಳು ಕೇರಳ ವಿವಿ ಕಲಾ ಉತ್ಸವಕ್ಕೆ ಇಂತಿಹಾದ್ ಹೆಸರನ್ನು ಬಳಸದಂತೆ ಆದೇಶ ನೀಡಿದ್ದರು. ಪೋಸ್ಟರ್ ಅಥವಾ ಬ್ಯಾನರ್ ಗಳಲ್ಲಿ ಹೆಸರು ಬಳಸಬಾರದು ಎಂದೂ ಆದೇಶದಲ್ಲಿ ಸೂಚಿಸಲಾಗಿದೆ. ಆದರೆ, ನ್ಯಾಯಾಲಯದ ಪರಿಗಣನೆಯಲ್ಲಿರುವ ವಿಷಯವಾಗಿರುವುದರಿಂದ ಹೆಸರನ್ನು ಹಿಂಪಡೆಯುವ ಉದ್ದೇಶವಿಲ್ಲ ಎಂದು ವಿಶ್ವವಿದ್ಯಾಲಯ ಒಕ್ಕೂಟ ಅಭಿಪ್ರಾಯಪಟ್ಟಿದೆ. ಹೈಕೋರ್ಟ್ ನೋಟಿಸ್ ಕಳುಹಿಸಿದ ಬಳಿಕ ವಿಸಿ ಹೆಸರು ನಿರಾಕರಿಸಿ ಆದೇಶ ಹೊರಡಿಸಿದ್ದಾರೆ.