ಎರ್ನಾಕುಳಂ: ಕೇರಳದಲ್ಲಿ ಮಾನವ ಜೀವಕ್ಕೆ ಬೆಲೆ ಇಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ದೇವನ್ ಹೇಳಿದ್ದಾರೆ. ಪೂಕೋಡ್ ಪಶುವೈದ್ಯಕೀಯ ಕಾಲೇಜು ವಿದ್ಯಾರ್ಥಿ ಸಿದ್ಧಾರ್ಥ್ ಸಾವು ಹಾಗೂ ಕಾಡುಪ್ರಾಣಿಗಳ ದಾಳಿಗೆ ಜನರು ಸಾವನ್ನಪ್ಪುತ್ತಿರುವ ವಿಚಾರವಾಗಿ ಅವರು ಪ್ರತಿಕ್ರಿಯಿಸಿದರು.
ದೇವನ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಕೇರಳದಲ್ಲಿ ಆಗುತ್ತಿರುವ ಯಾವುದೇ ಸಾವುಗಳಿಗೆ ಸರ್ಕಾರ ಹೊಣೆಗಾರಿಕೆ ತೆಗೆದುಕೊಳ್ಳುತ್ತಿಲ್ಲ, ಜನರು ಒಟ್ಟಾಗಿ ಬೀದಿಗಿಳಿಯಬೇಕಾದ ಪರಿಸ್ಥಿತಿ ಇದೆ ಎಂದಿರುವರು.
''ವನ್ಯಜೀವಿಗಳ ರಕ್ಷಣೆಗೆ ಕೇಂದ್ರ ಸರ್ಕಾರ ಸಾಕಷ್ಟು ಅನುದಾನ ನೀಡಿದೆ.ಆದರೆ ಇಲ್ಲಿ ಆ ಹಣ ಯಾವುದೂ ಬಳಕೆಯಾಗುತ್ತಿಲ್ಲ.ಮನುಷ್ಯನನ್ನು ಹೊಡೆದು ಸಾಯಿಸಲಿ, ಆನೆ ತುಳಿದು ಸಾಯಲಿ, ಯಾರೂ ಇದರ ಹೊಣೆ ಹೊರುತ್ತಿಲ್ಲ. ಇಲ್ಲಿನ ಆಡಳಿತಗಾರರು ಮೌನವಾಗಿದ್ದಾರೆ.ಕೇರಳದಲ್ಲಿ ಹಲವು ವರ್ಷಗಳಿಂದ ಅಭದ್ರತೆ ಕಾಡುತ್ತಿದೆ.ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು’’ ಎಂದರು.
"ಜನರೆಲ್ಲ ಬೀದಿಗಿಳಿಯಬೇಕು. ಮೊನ್ನೆ ಮೊನ್ನೆ ವಿದ್ಯಾರ್ಥಿಯೊಬ್ಬನನ್ನು ಹೊಡೆದು ಸಾಯಿಸಲಾಯಿತು. ಇದಕ್ಕೆ ಸರ್ಕಾರದಲ್ಲಿ ಯಾರೂ ಸ್ಪಂದಿಸಲಿಲ್ಲ. ಇದು ದುಃಖಕರವಾಗಿದೆ. ನಾವು ಹಲವಾರು ಪ್ರತಿಭಟನೆಗಳನ್ನು ನೋಡಿದ್ದೇವೆ. ಆದರೆ ಪರಿಹಾರ ಕಂಡುಬಂದಿಲ್ಲ. ಮಾನವ ಜೀವಕ್ಕೆ ಬೆಲೆ ಇಲ್ಲ. ಕೇರಳವÀನ್ನು ಬದಲಾಯಿಸಬೇಕಾದರೆ, ರಾಜಕೀಯ ಮತ್ತು ಧರ್ಮವನ್ನು ಲೆಕ್ಕಿಸದೆ ಜನರು ಮುಂದೆ ಬರಬೇಕು" ಎಂದು ದೇವನ್ ಹೇಳಿರುವರು.