ಕಾಸರಗೋಡು: ಅಂತಾರಾಷ್ಟ್ರ ಮಹಿಳಾ ದಿನಾಚರಣೆಯ ಅಂಗವಾಗಿ ಕಾಸರಗೋಡು ವ್ಯಾಪಾರೀ ವ್ಯವಸಾಯಿ ಏಕೋಪನಾ ಸಮಿತಿ ಮಹಿಳಾ ವಿಭಾಗ ವತಿಯಿಂದ ಕಾಸರಗೋಡು ಸರ್ಕಾರಿ ಅಸ್ಪತ್ರೆಗೆ ನೀರಿನ ಫಿಲ್ಟರ್ ಹಸ್ತಾಂತರಿಸಲಾಯಿತು.
ಇದೇ ಸಂದರ್ಭ ಆಸ್ಪತ್ರೆಯಲ್ಲಿನ ಹಲವು ಮಂದಿ ಮಹಿಳೆಯರನ್ನು ಗೌರವಿಸಿದರು. ಕಾಸರಗೋಡು ಗಂಗೆ ರಸ್ತೆಯ ನಿವೃತ್ತ ಶಿಕ್ಷಕಿ ಐ.ಕೆ.ನೆಲ್ಲಿಯಾಟ್ ಟೀಚರ್, ವಿದ್ಯಾನಗರ ಕೃಷ್ಣ ಅಷ್ಪತ್ರೆಯ ವೈದ್ಯೆ ಕೆ.ಯಶೋದಾ, ಅಣಂಗೂರಿನ ಶೋಭಾ ಚಂದ್ರಶೇಖರ್ ಎಂಬವರನ್ನು ಅವರ ನಿವಾಸಕ್ಕೆ ತೆರಳಿ ಸಂಘಟನೆಯ ಕಾರ್ಯಕರ್ತರು ಶಾಲು ಹೊದಿಶಿ ಫಲಪುಷ್ಪ ನೀಡಿ ಗೌರವಿಸಿದರು. ವ್ಯಾಪಾರೀ ವ್ಯವಸಾಯಿ ಏಕೋಪನ ಸಮಿತಿ ಮಹಿಳಾ ವಿಭಾಗ ಅಧ್ಯಕ್ಷೆ ಉಮಾ ಸುಮಿತ್ರ, ಕಾರ್ಯದರ್ಶಿ ಬೀನಾ ಶೆಟ್ಟಿ, ನೇತಾರಾದ ಆಶಾ ರಾಧಾಕೃಷ್ಣನ್, ಖೈರುನ್ನೀಸ ಕಡವತ್ತ್, ಕೆ.ಚಂದ್ರಮಣಿ, ಕೆ.ಇಂಧಿರಾ, ಉಷಾ ಜನಾರ್ದನನ್, ಸಂದ್ಯಾ, ಕೆ.ಪೂರ್ಣಿಮ ಮೊದಲಾದವರು ಉಪಸ್ಥಿತರಿದ್ದರು.