ಕಸರಗೋಡು: ಬೇಡಡ್ಕ ಗ್ರಾಮ ಪಂಚಾಯಿತಿ ಪೆರ್ಲಡ್ಕ ನಿವಾಸಿ, ಕಲಾಸಾಂಸ್ಕøತಿಕ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ಶಶಾಂಕನ್ ಜ್ಯೋತಿಷ್ಯ ಅವರ ಚಿಕಿತ್ಸೆಗೆ ನೆರವು ಒದಗಿಸುವಂತೆ ಶಶಾಂಕನ್ ಜ್ಯೋತಿಷ್ಯ ಚಿಕಿತ್ಸಾ ಸಹಾಯ ಸಮಿತಿ ಮನವಿಮಾಡಿದೆ.
ಶಶಾಂಕನ್ ಜ್ಯೋತಿಷ್ಯ ಅವರ ಎರಡೂ ಕಿಡ್ನಿ ವಿಫಲಗೊಂಡಿದ್ದು, ತಕ್ಷಣ ಕಿಡ್ನಿ ಬದಲಾಯಿಸುವ ಚಿಕಿತ್ಸೆ ಕೈಗೊಳ್ಳಬೇಕಾಗಿದ್ದು, ಇದಕ್ಕೆ 40ಲಕ್ಷ ರೂ. ವೆಚ್ಚ ತಗುಲಲಿದೆ. ಚಿಕಿತ್ಸಾ ಸಹಾಯಕ್ಕಾಗಿ ಬೇಡಡ್ಕ ಗ್ರಾಪಂ ಸದಸ್ಯ ಎಂ. ಗೋಪಾಲಕೃಷ್ಣನ್ ಕುಳವಯಲ್ ಚೆಯರ್‍ಮ್ಯನ್ ಆಗಿರುವ ಚಿಕಿತ್ಸಾ ಸಹಾಯ ಸಮಿತಿ ರಚಿಸಲಾಗಿದ್ದು, ದಾನಿಗಳಿಂದ ನೆರವು ಯಾಚಿಸಲಾಗಿದೆ. ಧನಸಹಾಯ ನೀಡುವವರು ಕೇರಳ ಗ್ರಾಮೀಣ ಬ್ಯಾಂಕ್, ಉಳಿತಾಯ ಖಾತೆ ಸಂಖ್ಯೆ 40519101038310, ಐಎಫ್‍ಎಸ್‍ಸಿ ಕೋಡ್-ಕೆಎಲ್‍ಜಿಬಿ0040519 ಗೆ ನೀಡಬಹುದು ಎಂದು ಪ್ರಕಟಣೆ ತಿಳಿಸಿದೆ.