ಕುಂಬಳೆ: ಪೆರ್ಮುದೆ ಲಾರೆನ್ಸ್ ನಗರದ ಸೈಂಟ್ ಲಾರೆನ್ಸ್ ದಿ ಮಾರ್ಟಿರ್ ಇಗರ್ಜಿಯಲ್ಲಿ ಕೆಥೋಲಿಕ್ ಸಭಾ ಪೆರ್ಮುದೆ ಘಟಕದ ವತಿಯಿಂದ ಭಾನುವಾರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಡೆಯಿತು. ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಧರ್ಮಗುರು ಫಾ. ಹೆರಾಲ್ಡ್ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ಡಾ. ದೀಪಾ ರೆಬೆಲ್ಲೊ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಇಗರ್ಜಿಯ ಪಾಲನಾ ಸಮಿತಿ ಕಾರ್ಯದರ್ಶಿ ಲ್ಯಾನ್ಸಿ ಡಿಸೋಜ, ಪುತ್ತಿಗೆ ಪಂಚಾಯಿತಿ ಸದಸ್ಯೆ ಶಾಂತಿ ಪ್ರಭಾ ಡಿಸೋಜ, ಪೈವಳಿಕೆ ಪಂಚಾಯಿತಿ ಮಾಜಿ ಸದಸ್ಯೆ ಥೆರೆಸಾ ಡಿಸೋಜ, ಐರಿನ್ ಜ್ಯೋತಿ ಡಿಸೋಜ, ಶೋಭಾ ಡಿ*ಅಲ್ಮೇಡಾ ಉಪಸ್ಥಿತರಿದ್ದರು. ಇಗರ್ಜಿಯ ಪಾಲನಾ ಸಮಿತಿ ಉಪಾಧ್ಯಕ್ಷೆ ಡೋರಿನ್ ಪಿರೆರಾ ಸ್ವಾಗತಿಸಿ, ಸವಿತಾ ಡಿಸೋಜ ವಂದಿಸಿದರು. ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ ಹಾಗೂ ಸಾಧನೆಗೈದ ಹನ್ನೊಂದು ಮಂದಿ ಮಹಿಳೆಯರು ಹಾಗೂ ಇಬ್ಬರು ಹೆಣ್ಮಕ್ಕಳನ್ನು ಸನ್ಮಾನಿಸಲಾಯಿತು. ಫ್ಲಾವಿಯಾ ಡಿಸೋಜ ಸನ್ಮಾನಿತರನ್ನು ಪರಿಚಯಿಸಿದರು. ಮಹಿಳೆಯರ ದಿನದ ಶುಭ ಕೋರಿ ಮಹಿಳೆಯರಿಂದ ಗಾಯನ ನಡೆಯಿತು. ಡೆಫ್ನಿ ಸ್ಮಿತಾ ಡಯಾಸ್ ಕಾರ್ಯಕ್ರಮ ನಿರೂಪಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಡಾ. ದೀಪ ರೆಬೆಲ್ಲೊ ಅವರು ಮಹಿಳೆಯರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು. ನ್ಯಾಯವಾದಿ ಲೊಲಿನಾ ಡಿಸೋಜ ಅವರು ಸಮಾಜದಲ್ಲಿ ಮಹಿಳೆಯರ ಹಕ್ಕು ಹಾಗೂ ಪಾತ್ರದ ಕುರಿತು ಮಾಹಿತಿ ನೀಡಿದರು. ಬಳಿಕ ಮಹಿಳೆಯರಿಗಾಗಿ ವಿವಿಧ ಆಟೋಟ ಸ್ಪರ್ಧೆಗಳು-ಮನೋರಂಜನಾ ಕಾರ್ಯಕ್ರಮಗಳು ನಡೆದುವು. ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ಹಾಗೂ ಮಹಿಳೆಯರ ಸಹಮಿಲನ ಕಾರ್ಯಕ್ರಮ ನಡೆಯಿತು.