ಕುಂಬಳೆ: ವಾಣಿಯ ಸಮುದಾಯದ ಕುಲದೇವತೆ ಪೆರ್ಣೆ ಶ್ರಿ ಮುಚ್ಚಿಲೋಟ್ ಭಗವತೀ ಕ್ಷೇತ್ರದಲ್ಲಿ ಸಮಾಜ ಬಾಂಧವರ ವದುವರರ ಸಾಮೂಹಿಕ ವಿವಾಹ ಮಾ. 12ರಂದು ಶ್ರೀಕ್ಷೇತ್ರದಲ್ಲಿ ಜರುಗಲಿದೆ. ಇದೇ ಸಂದರ್ಭ ಶ್ರೀ ಕ್ಷೇತ್ರದಲ್ಲಿ ಸಂಭ್ರಮದ ಕಳಿಯಾಟ ಮಹೋತ್ಸವ ಸಂಪನ್ನಗೊಂಡಿರುವ ಹಿನ್ನೆಲೆಯಲ್ಲಿ ಮೇಲೇರಿಯ ಕರಿ ಗುಡಿಸುವ ಸಂಪ್ರದಾಯವೂ ನಡೆಯಲಿದ್ದು, ತಂತ್ರಿವರ್ಯರ ದಿವ್ಯ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನೆರವೇರಲಿದೆ.