ಬದಿಯಡ್ಕ: ಕ್ಯಾಂಪ್ಕೋ ಸಂಸ್ಥೆಯ `ಸಾಂತ್ವನ' ಯೋಜನೆಯಡಿಯಲ್ಲಿ ಕ್ಯಾಂಪ್ಕೋ ನೀರ್ಚಾಲು ಶಾಖೆಯ ಸಕ್ರಿಯ ಸದಸ್ಯರಾದ ನಾರಾಯಣ ಮಯ್ಯ ಬನ್ನೂರು, ಮಧೂರು ಇವರ ಆಂಜಿಯೋಪ್ಲಾಸ್ಟಿ ಚಿಕಿತ್ಸೆಗೆ ಸಹಾಯಧನದ ಮೊತ್ತ ರೂ.50,000-ದ ಚೆಕ್ ನ್ನು ಕ್ಯಾಂಪ್ಕೋ ಸಂಸ್ಥೆಯ ಉಪಾಧ್ಯಕ್ಷ ಶಂಕರನಾರಾಯಣ ಭಟ್ ಖಂಡಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕ್ಯಾಂಪ್ಕೋ ಬದಿಯಡ್ಕ ಪ್ರಾಂತೀಯ ಪ್ರಬಂಧಕ ಗಿರೀಶ್ ಇ, ನೀರ್ಚಾಲು ಶಾಖೆಯ ಪ್ರಬಂಧಕ ಜಯನ್ ಇ, ಬದಿಯಡ್ಕ ಶಾಖೆಯ ಪ್ರಬಂಧಕ ದಿನೇಶ್ ಕುಮಾರ್ ಕೆ ಉಪಸ್ಥಿತರಿದ್ದರು.