ಮುಂಬೈ: ಕಳೆದ 12 ವರ್ಷಗಳಲ್ಲಿ ಭಾರತದಲ್ಲಿ ಡಿಜಿಟಲ್ ವಹಿವಾಟು 90 ಪಟ್ಟು ಹೆಚ್ಚಾಗಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಬಹಿರಂಗಪಡಿಸಿದ್ದಾರೆ. ಮುಂಬೈನ ಆರ್‌ಬಿಐ ಕೇಂದ್ರ ಕಚೇರಿಯಲ್ಲಿ ಸೋಮವಾರ ನಡೆದ ಡಿಜಿಟಲ್ ಪಾವತಿ ಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.

2012-13ರಲ್ಲಿ ಡಿಜಿಟಲ್ ಪಾವತಿಗಳು ದೇಶದಲ್ಲಿ 162 ಕೋಟಿ ಚಿಲ್ಲರೆ ಪಾವತಿಗಳನ್ನು ಹೊಂದಿದ್ದರೆ, ಇದು 2023-24 ರ ವೇಳೆಗೆ 14,726 ಕೋಟಿಗೆ ಏರಿಕೆಯಾಗಿದೆ. ಅಂದರೆ ಕಳೆದ 12 ವರ್ಷಗಳಲ್ಲಿ ಡಿಜಿಟಲ್ ಪಾವತಿಗಳು ಸರಿಸುಮಾರು 90 ಪಟ್ಟು ಹೆಚ್ಚಾಗಿದೆ. ಜಾಗತಿಕ ಡಿಜಿಟಲ್ ಪಾವತಿಗಳಲ್ಲಿ ಶೇಕಡ 49 ರಷ್ಟು ಭಾರತದಲ್ಲಿ ಮಾಡಲಾಗುತ್ತದೆ ಎಂದು ಶಕ್ತಿಕಾಂತ ದಾಸ್ ಹೇಳಿದ್ದಾರೆ. ಯುಪಿಐ ಭಾರತದಲ್ಲಿ ಮಾತ್ರವಲ್ಲದೆ ವಿಶ್ವದಲ್ಲೇ ಅತ್ಯಂತ ವೇಗದ ಪಾವತಿ ವ್ಯವಸ್ಥೆಯಾಗಿದೆ.
ಏತನ್ಮಧ್ಯೆ, ದೇಶೀಯವಾಗಿ ಡಿಜಿಟಲ್ ಪಾವತಿಗಳಲ್ಲಿ ಗಮನಾರ್ಹ ಬೆಳವಣಿಗೆಯನ್ನು ದಾಖಲಿಸುವಲ್ಲಿ ಯುಪಿಐ ಪ್ರಮುಖ ಆಟಗಾರ ಎಂದು ಗವರ್ನರ್ ಹೇಳಿದರು. ಕಳೆದ ವರ್ಷ ಶೇ.80ರಷ್ಟು ಆನ್ ಲೈನ್ ಪಾವತಿಗಳು ಇದರ ಮೂಲಕವೇ ಆಗಿವೆ ಎಂದು ತಿಳಿಸಿದರು. 2017ರಲ್ಲಿ 43 ಕೋಟಿ ಯುಪಿಐ ವಹಿವಾಟು ನಡೆದಿದ್ದು, 2023ರ ವೇಳೆಗೆ 11,761 ಕೋಟಿಗೆ ಏರಿಕೆಯಾಗಿದೆ. ಆದಾಯ ತೆರಿಗೆ ಪಾವತಿ, ವಿಮಾ ಪ್ರೀಮಿಯಂ ಪಾವತಿ, ಮ್ಯೂಚುವಲ್ ಫಂಡ್ ಪಾವತಿ ಮತ್ತು ಇ-ಕಾಮರ್ಸ್ ವಹಿವಾಟುಗಳಿಗೆ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಹೆಚ್ಚಿನ ಜನರು ಪಾವತಿಸುತ್ತಿದ್ದಾರೆ ಎಂದು ಗವರ್ನರ್ ಹೇಳಿದರು.