ಕಾಸರಗೋಡು: ಸಂಶೋಧನಾ ಪ್ರಬಂಧದ ಪೀಠಿಕೆ ಎಂದರೆ ಸಾಮಾನ್ಯದಿಂದ ನಿರ್ದಿಷ್ಟತೆಗೆ ಬರುವುದಾಗಿದ್ದು, ಸಂಶೋಧನೆಯ ವಿಧಾನ ಮತ್ತು ವೈಧಾನಿಕತೆ ಎರಡೂ ವ್ಯತ್ಯಸ್ತವಾಗಿರುವುದಾಗಿ ಬಂಟ್ವಾಳದ ಸಿದ್ಧಕಟ್ಟೆ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ, ಕನ್ನಡ ಚಿಂತಕ ಡಾ. ಅಜಕ್ಕಳ ಗಿರೀಶ್ ಭಟ್ ತಿಳಿಸಿದ್ದಾರೆ.
ಅವರು ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಕಾಸರಗೋಡು ಪೆರಿಯ ಕ್ಯಾಂಪಸ್‍ನಲ್ಲಿ ಕನ್ನಡ ವಿಭಾಗ ಆಯೋಜಿಸಿದ್ದ ಸಂಶೋಧನಾ ವಿಧಾನಗಳ ಕುರಿತಾದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಐಡಿಯಾವನ್ನು ವಿಚಾರ ಎಂದೂ, ಐಡಿಯಾಲಜಿಯನ್ನುವಿಚಾರಧಾರೆ ಎಂದೂ, ಥಿಯರಿಯನ್ನು ಸಿದ್ಧಾಂತ ಎಂದೂ ಅನುವಾದಿಸಿಕೊಳ್ಳುವುದು ಹೆಚ್ಚು ಸೂಕ್ತ ಎಂದು ಅಭಿಪ್ರಾಯಪಟ್ಟರು. ಸಹಾಯಕ ಪ್ರಾಧ್ಯಾಪಕ ಡಾ. ಗೋವಿಂದರಾಜು ಸಂವಾದದಲ್ಲಿ ಭಾಗವಹಿಸಿದ್ದರು. ವಿಭಾಗದಸ್ನಾತಕೋತ್ತರ ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿಭಾಗದ ಸಹಾಯಕ ಪ್ರಾಧ್ಯಾಪಕ ಹಾಗೂ ವಿಶೇಷೋಪನ್ಯಾಸದ ಸಂಯೋಜಕ ಡಾ. ಪ್ರವೀಣ ಪದ್ಯಾಣ ಪ್ರಾಸ್ತಾವಿಕ ಮಾತುಗಳನ್ನಾಡಿ, ಸ್ವಾಗತಿಸಿದರು. ಸಂಶೋಧನಾ ವಿದ್ಯಾರ್ಥಿ ಶಶಾಂಕ ಹೆಚ್ ವಿ ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕ ಚೇತನ್ ಮುಂಡಾಜೆ ವಂದಿಸಿದರು.