ಮುಳ್ಳೇರಿಯ: ನೆಟ್ಟಣಿಗೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಇಂದು( ಮಾ.29 ) ಬೆಳಗ್ಗೆ 10.30 ರಿಂದ ಜರಗಲಿದೆ. ಇದರಂಗವಾಗಿ ಜರಗುವ ಸಭಾ ಕಾರ್ಯಕ್ರಮವನ್ನು ಬೆಳ್ಳೂರು ಗ್ರಾ.ಪಂ ಅಧ್ಯಕ್ಷ ಶ್ರೀಧರ.ಎಂ. ಉದ್ಘಾಟಿಸುವರು. ಬೆಳ್ಳೂರು ಗ್ರಾ.ಪಂ ಸದಸ್ಯ ಚಂದ್ರಹಾಸ ರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಬೆಳ್ಳೂರು ಗ್ರಾ.ಪಂ ಆರೋಗ್ಯ ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷ ಜಯಕುಮಾರ್, ಬೆಳ್ಳೂರು ಗ್ರಾ.ಪಂ ಸದಸ್ಯೆ ಗೀತಾ ಬಿ.ಎನ್, ಕುಂಬಳೆ ಉಪಜಿಲ್ಲಾ ಸಹಾಯಕ ವಿದ್ಯಾಧಿಕಾರಿ ಶಶಿಧರ ಎಂ, ಕುಂಬಳೆ ಬಿ.ಪಿ.ಸಿ.ಬಿ.ಆರ್.ಸಿ ಜಯರಾಮ, ನಿವೃತ್ತ ಪ್ರಾಂಶುಪಾಲ ಯತೀಶ್ ಕುಮಾರ್ ರೈ, ಗಡಿನಾಡ ಸಾಂಸ್ಕøತಿಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎನ್. ಚನಿಯಪ್ಪ ನಾಯ್ಕ, ಪತ್ರಕರ್ತ ಅಖಿಲೇಶ್ ನಗುಮುಗಂ, ಬೆಳ್ಳೂರು ಸೇವಾ ಸಹಕಾರಿ ಬ್ಯಾಂಕ್ ನಿರ್ದೇಶಕಿ ಚಂದ್ರಕಲಾ, ಬೆಳ್ಳೂರು ಸೇವಾ ಸಹಕಾರಿ ಬ್ಯಾಂಕ್ ಕಾರ್ಯದರ್ಶಿ ಉದಯ ಕುಮಾರ್ ಎನ್ ಮುತಾದವರು ಮುಖ್ಯ ಅಥಿತಿಗಳಾಗಿ ಉಪಸ್ಥಿತರಿರುವರು.
ಈ ಸಂದರ್ಭದಲ್ಲಿ 2024 ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ಪುರಸ್ಕøತ ಸತ್ಯನಾರಾಯಣ ಬೆಳೇರಿಯವರಿಗೆ ಗೌರವಾರ್ಪಣೆ ನಡೆಯಲಿದೆ. ನಂತರ ಬಹುಮಾನ ವಿತರಣೆ ನಡೆಯಲಿದೆ. ಮಧ್ಯಾಹ್ನ 2 ರಿಂದ ಶಾಲೆ ಹಾಗೂ ಅಂಗನವಾಡಿ ಮಕ್ಕಳಿಂದ ವೈವಿಧ್ಯಮಯ ಕಾರ್ಯಕ್ರಮ ಜರಗಲಿದೆ.