ಕೋಝಿಕ್ಕೋಡ್; ಜಾರಿ ನಿರ್ದೇಶನಾಲಯಕ್ಕೆ ಹೆದರುವುದಿಲ್ಲ ಎಂದು ಸಚಿವ ಪಿಎ ಮುಹಮ್ಮದ್ ರಿಯಾಝ್ ಹೇಳಿದ್ದಾರೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪುತ್ರಿಯೂ, ಸಚಿವ ಮೊಹಮ್ಮದ್ ರಿಯಾಜ್ ಅವರ ಪತ್ನಿಯಾಗಿರುವ ವೀಣಾ ವಿಜಯನ್ ವಿರುದ್ಧ ಇಡಿ ಪ್ರಕರಣದ ಹಿನ್ನೆಲೆಯಲ್ಲಿ ಈ ಪ್ರತಿಕ್ರಿಯೆ ನೀಡಿದ್ದಾರೆ.
ಕೇಂದ್ರ ಸರ್ಕಾರ ಬೇಡ ಎನ್ನುವಷ್ಟು ಶಕ್ತಿ ಇರುವವರು ಸಂಸತ್ತಿಗೆ ಬರಬೇಕು. ಎಡಪಕ್ಷಗಳೇ ಆ ಶಕ್ತಿ. ಈಗ ಕೆಲವು ಯುಡಿಎಫ್ ನಾಯಕರು ರಾತ್ರಿ ಮೆರವಣಿಗೆ ನಡೆಸುತ್ತಿದ್ದಾರೆ. ಯು.ಡಿ.ಎಫ್ ನ ಬಹುಪಾಲು ಅಭ್ಯರ್ಥಿಗಳು ಮಾಜಿ ಸಂಸದರು. ಇ.ಡಿ. ಅಪರಾಧಗಳನ್ನು ಸಾಬೀತುಪಡಿಸುವ ವಿಷಯದಲ್ಲಿ ವಿಶ್ವದ ಅತ್ಯಂತ ಹಿಂದುಳಿದ ಸಂಸ್ಥೆಯಾಗಿದೆ ಎಂದು ಮುಹಮ್ಮದ್ ರಿಯಾಝ ಹೇಳಿರುವರು.