ಉಪ್ಪಳ : ಮಂಜೇಶ್ವರದ ಉಪ್ಪಳ ನಿವಾಸಿಯೊಬ್ಬನನ್ನು ಗುಜರಾತ್ ಪೊಲಿಸರು ಬಂಧಿಸಿದ್ದು, ಈತನಿಂದ ಅನಧಿಕೃತ ಬಂದೂಕು ವಶಪಡಿಸಿಕೊಂಡಿದ್ದಾರೆ. ಉಪ್ಪಳ ಮಜಲ್ ನಿವಾಸಿ, ಉಪ್ಪಳದಲ್ಲಿ ಆಟೋ ಚಾಲಕನಾಗಿ ದುಡಿಯುತ್ತಿದ್ದ ಮಹಮ್ಮದ್ ಸಉಹೈಲ್ ಬಂಧಿತ.
ಮಹಮ್ಮದ್ ಸುಹೈಲ್ ಕುರಿತಾದ ಸಮಗ್ರ ಮಾಹಿತಿ ಕಲೆಹಾಕಲು ಗುಜರಾತ್ ಪೊಲಿಸರು ಕೇರಳದ ಪೊಲೀಸರ ನೆರವು ಯಾಚಿಸಿದ್ದಾರೆ. ಗುಜರಾತ್ ಪೊಲೀಸರಿಮದ ಲಭಿಸಿದ ಸೂಚನೆಯನ್ವಯ ಮಂಜೇಶ್ವರ ಠಾಣೆ ಪೊಲೀಸರು ಆರೋಪಿ ಪೂರ್ವಾಪರ ಕಲೆಹಾಕುತ್ತಿದ್ದು, ಜತೆಗೆ ಗುಪ್ತಚರ ಏಜನ್ಸಿಗಳೂ ತನಿಖೆ ಆರಂಭಿಸಿದೆ. ಆರೋಪಿ ಗಾಂಜಾ ಸಾಗಾಟ ತಡದ ಜತೆ ನಂಟು ಹೊಂದಿರುವುದಾಗಿ ಮಂಜೇಶ್ವರ ಪೊಲೀಸರು ತಿಳಿಸಿದ್ದಾರೆ. ಈತನ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದಾರೆ.