ಮುಳ್ಳೇರಿಯ: ಪದ್ಮಶ್ರೀ ವಿಜೇತ ಸತ್ಯನಾರಾಯಣ ಬೆಳೇರಿ ಅವರನ್ನು ಅಖಿಲಕೇರಳ ಯಾದವ ಸಭಾ ಕಾಸರಗೋಡು ತಾಲೂಕು ಸಮಿತಿ ವತಿಯಿಂದ ಅಭಿನಂದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಸತ್ಯನಾರಾಯಣ ಅವರ ಮನೆಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ತಾಲೂಕು ಅಧ್ಯಕ್ಷ ನಾರಾಯಣ ನೀರ್ಚಾಲು ಅವರು ಶಾಲು ಹೊದಿಸಿ ಸ್ಮರಣಿಕೆ ನೀಡಿದರು. ಬಳಿಕ ಮಾತನಾಡಿ, ದೇಶದ ಅತ್ಯುತ್ತಮ ಪುರಸ್ಕಾರಕ್ಕೆ ಪಾತ್ರರಾಗಿರುವ ಸತ್ಯನಾರಾಯಣ ಅವರ ಸಾಧನೆ ಇಡೀ ಯಾದವ ಸಮುದಾಯಕ್ಕೆ ಲಭಿಸಿದ ಅಂಗೀಕಾರವಾಗಿದೆ. ಇದು ಮುಂದಿನ ನಮ್ಮ ಜನಾಂಗಕ್ಕೆ ಮಾದರಿಯಾಗಲಿ. ಪ್ರತಿಯೊಬ್ಬರನ್ನು ಕೃಷಿಯತ್ತ ಆಕರ್ಷಿಸಲು ಸಹಾಯಕವಾಗಬಲ್ಲದು. ಸಮುದಾಯದ ಹಿರಿಮೆಯನ್ನು ಎತ್ತಿ ಹಿಡಿದ ಸತ್ಯನಾರಾಯಣ ಬೆಳೇರಿ ಅವರಿಗೆ ಉಜ್ವಲ ಭವಿಷ್ಯ ಉಂಟಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಯಾದವ ಸಭಾ ತಾಲೂಕು ಉಪಾಧ್ಯಕ್ಷ ಸೀತಾರಾಮ ಕೂಡ್ಲಂಗಲ್ಲು, ರೋಹಿಣಿ ಕಾನಕ್ಕೋಡು, ತಾಲೂಕು ಕಾರ್ಯದರ್ಶಿ ಅಪ್ಪಕುಂuಟಿಜeಜಿiಟಿeಜ ಕೊನಲ, ರಾಜ್ಯ ಸಮಿತಿ ಸದಸ್ಯ ಕರುಣಾಕರ ಬದಿಯಡ್ಕ, ಕಾರ್ಯಕಾರಿ ಸಮಿತಿ ಸದಸ್ಯರಾದ ಕೆ.ಗಂಗಾಧರ್ ಯಾದವ್, ಮಾಜಿ ಪಂ. ಸದಸ್ಯೆ ರೇಣುಕಾದೇವಿ, ಗೀತಾ ಬಾಲಕೃಷ್ಣ, ಅಂಬುಜಾಕ್ಷ ನಡುಮೂಲೆ, ಜನಾರ್ದನ, ಸುಧೀರ್ ಮತ್ತಿತರರು ಉಪಸ್ಥಿತರಿದ್ದರು.