ಕಾಸರಗೋಡು: ಮಾಯಿಪ್ಪಾಡಿಯ ಜಿಲ್ಲಾ ಶಿಕ್ಷಕರ ತರಬೇತಿ ಕೇಂದ್ರ(ಡಯಟ್)ಕ್ಯಾಂಪಸ್‍ನಲ್ಲಿ ಕಾಸರಗೋಡು ಜಿಲ್ಲಾ ಪಂಚಾಯಿತಿಯ ಅಭಿವೃದ್ಧಿ ನಿಧಿ ಬಳಸಿ 15 ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಂಕ್ರಿಟೀಕರಣಗೊಳಿಸಿ ನವೀಕರಿಸಿದ ರಸ್ತೆಯ ಉದ್ಘಾಟನೆ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಶಾನವಾಸ್ ಪಾದೂರು ನೆರವೇರಿಸಿದರು. ಮಧೂರು ಗ್ರಾಮ ಪಮಚಾಯಿತಿ ಅಧ್ಯಕ್ಷ ಕೆ. ಗೋಪಾಲಕೃಷ್ಣ, ಕಾಸರಗೋಡು ಬ್ಲಾಕ್ ಪಂಚಾಯಿತಿ ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರು, ಡಯೆಟ್ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಇದೇ ಸಂದರ್ಭ ಜಿಲ್ಲಾ ಪಂಚಾಯಿತಿಯ ಸೋಲಾರ್ ಪ್ಯಾನಲ್ ಯೋಜನೆಯನ್ನೂ ಶಾನವಾಜ್ ಪಾದೂರು ಉದ್ಘಾಟಿಸಿದರು.