ನವದೆಹಲಿ :ಹಿರಿಯ ತನಿಖಾ ಪತ್ರಕರ್ತ ಹಾಗೂ ಲೇಖಕ ಶಂತನು ಗುಹಾ ರೇ ಅವರು ಸೋಮವಾರ ನಿಧನರಾಗಿದ್ದಾರೆ.
25 ವರ್ಷಕ್ಕೂ ಅಧಿಕ ಸಮಯದಿಂದ ಪತ್ರಿಕಾ ರಂಗದಲ್ಲಿ ತೊಡಗಿಸಿಕೊಂಡಿದ್ದ ರೇ ಅವರ ನಿಧನಕ್ಕಾಗಿ ಮಾಧ್ಯಮ ಬಳಗವು ಕಂಬನಿ ಮಿಡಿದಿದ್ದು, ಅವರ ಅನೇಕ ಮಾಜಿ ಸಹೋದ್ಯೋಗಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸಂತಾಪಗಳನ್ನು ಸೂಚಿಸಿದ್ದಾರೆ.
ಪ್ರತಿಷ್ಠಿತ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯುನಿಕೇಷನ್ ಮತ್ತು ದಿ ವಾರ್ಟನ್ ಸ್ಕೂಲ್ ನ ಹಳೆಯ ವಿದ್ಯಾರ್ಥಿಯಾಗಿದ್ದ ರೇ ಸೆಂಟ್ರಲ್ ಯುರೋಪಿಯನ್ ನ್ಯೂಸ್ನ ಏಶ್ಯಾ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದರು.
ರೇ 2011ರ ಕಲ್ಲಿದ್ದಲು ಹಗರಣ,ಭೂಮಿಯ ಲೀಸ್ಗಾಗಿ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ) ಮತ್ತು ಜಿಎಂಆರ್ ನೇತೃತ್ವದ ದಿಲ್ಲಿ ಅಂತರರಾಷ್ಟ್ರೀಯ ವಿಮಾನನಿಲ್ದಾಣ ನಿ. ನಡುವಿನ ಒಪ್ಪಂದದಲ್ಲಿಯ ಅಕ್ರಮಗಳ ಕುರಿತು ತನ್ನ ತನಿಖಾ ವರದಿಗಳಿಂದಾಗಿ ಪ್ರಸಿದ್ಧರಾಗಿದ್ದರು.
ಕ್ರಿಕೆಟ್ ನಲ್ಲಿ ತನ್ನ ಬರವಣಿಗೆಗಳಿಗಾಗಿ ರಾಮನಾಥ ಗೊಯೆಂಕಾ ಪ್ರಶಸ್ತಿ, ಭಾರತದಲ್ಲಿ ಗರ್ಭಕಂಠ ಕ್ಯಾನ್ಸರ್ ಸಾವುಗಳ ಕುರಿತು ತನ್ನ ವರದಿಗಾರಿಕೆಗಾಗಿ ಲಾಡ್ಲಿ ಪ್ರಶಸ್ತಿ ಮತ್ತು ಜಲ ಸಂಬಂಧಿತ ವಿಷಯಗಳಲ್ಲಿ ತನ್ನ ಕೆಲಸಕ್ಕಾಗಿ ವಾಷ್ ಪ್ರಶಸ್ತಿಗಳಿಗೆ ರೇ ಭಾಜನರಾಗಿದ್ದರು.