ಕೊಚ್ಚಿ: ಪದ್ಮಜಾ ವೇಣುಗೋಪಾಲ್ ಬಿಜೆಪಿ ಸೇರಿರುವ ಹಿಂದೆ ನನ್ನ ಕೈವಾಡವಿದೆ ಎಂಬ ವಿರೋಧ ಪಕ್ಷದ ನಾಯಕ ವಿಡಿ ಸತೀಶನ್Àಮಾಡಿರುವ ಆರೋಪವನ್ನು ಮಾಜಿ ಡಿಜಿಪಿ ಹಾಗೂ ಕೊಚ್ಚಿ ಮೆಟ್ರೋ ಎಂಡಿ ಲೋಕನಾಥ್ ಬೆಹ್ರಾ ಅಲ್ಲಗಳೆದಿದ್ದಾರೆ.
ಪದ್ಮಜಾ ಅವರ ಬಿಜೆಪಿ ಪ್ರವೇಶಕ್ಕೆ ಕೊಚ್ಚಿಯ ಮಾಜಿ ಐಪಿಎಸ್ ಅಧಿಕಾರಿಯೊಬ್ಬರು ಮಧ್ಯವರ್ತಿಯಾಗಿ ಕೆಲಸ ಮಾಡಿದ್ದಾರೆ ಎಂದು ವಿಡಿ ಸತೀಶನ್ ಆರೋಪಿಸಿದ್ದರು.
ಆಧಾರ ರಹಿತ ಆರೋಪ ಮಾಡಲಾಗುತ್ತಿದೆ. ಅದರಲ್ಲಿ ನನ್ನ ಪಾಲು ಇಲ್ಲ. ಇನ್ನು ಹೇಳಲು ಏನೂ ಇಲ್ಲ ಎಂದು ಲೋಕನಾಥ್ ಬೆಹ್ರಾ ಹೇಳಿದ್ದಾರೆ.
ಕೇರಳದ ಕಾಂಗ್ರೆಸ್ ಮುಖಂಡರೊಬ್ಬರು ಬಿಜೆಪಿಗೆ ಸೇರ್ಪಡೆಗೊಂಡಿರುವುದು ಸಿಪಿಎಂ ನಾಯಕರಿಗೆ ಹೆಚ್ಚು ಖುಷಿ ತಂದಿದೆ ಎಂದು ಸತೀಶನ್ ಟೀಕಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಕೇರಳದಲ್ಲಿ ಸಿಪಿಎಂ ಮತ್ತು ಬಿಜೆಪಿ ನಡುವೆ ಪೈಪೋಟಿ ಇದೆ ಎಂದು ಎಡರಂಗದ ಸಂಚಾಲಕ ಇಪಿ ಜಯರಾಜನ್ ಹೇಳಿದ್ದರು ಎಂದು ಸತೀಶನ್ ತಿಳಿಸಿದರು.
ಇದೇ ವೇಳೆ, ಪದ್ಮಜಾ ವೇಣುಗೋಪಾಲ್ ಅವರು ಬಿಜೆಪಿಗೆ ತನ್ನ ಪ್ರವೇಶದ ವಿಷಯದಲ್ಲಿ ಯಾರೂ ಹಸ್ತಕ್ಷೇಪ ಮಾಡಿಲ್ಲ ಎಂದು ಹೇಳಿರುವರು.