ಪೆರ್ಲ : ಎಣ್ಮಕಜೆ ಗ್ರಾಮ ಪಂಚಾಯತಿ ಪೆರ್ಲತ್ತಡ್ಕದಲ್ಲಿ ನಿರ್ಮಿಸಿದ ಕಮ್ಯೂನಿಟಿ ಹಾಲ್ ಉದ್ಘಾಟನೆ ಇಂದು(ಮಾರ್ಚ್ 8) ಬೆಳಗ್ಗೆ 10 ಕ್ಕೆ ಜರಗಲಿದೆ. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಕಟ್ಟಡವನ್ನು ಉದ್ಘಾಟಿಸುವರು. ಎಣ್ಮಕಜೆ ಗ್ರಾಮ ಪಂಚಾಯತಿ ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಅಧ್ಯಕ್ಷತೆವಹಿಸುವರು. ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷೆ ಸಮೀನಾ ಟೀಚರ್ ಮುಖ್ಯ ಅತಿಥಿಗಳಾಗಿರುವರು. ಮಂಜೇಶ್ವರ ಬ್ಲಾಕ್ ಎಕ್ಸೂಟಿವ್ ಇಂಜಿನೀಯರ್ ಸುನಿಲ್ ಕುಮಾರ್ ವರದಿ ಮಂಡಿಸುವರು.ಎಣ್ಮಕಜೆ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ರಮ್ಲ ಇಬ್ರಾಹಿಂ, ಜಿಲ್ಲಾ ಪಂಚಾಯತಿ ಸದಸ್ಯ ನಾರಾಯಣ ನಾಯ್ಕ, ವಾರ್ಡ್ ಸದಸ್ಯ ಹಾಗೂ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ್, ಕ್ಷೇಮಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸೌಧಭಿ ಹನೀಫ್, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಶ್ರೀ ಕುಲಾಲ್, ಮಂಜೇಶ್ವರ ಬ್ಲಾಕ್ ಪಂಚಾಯತಿ ಸದಸ್ಯ ಬಟ್ಟು ಶೆಟ್ಟಿ,ಎಣ್ಮಕಜೆ ಗ್ರಾಮ ಪಂಚಾಯತಿ ಸದಸ್ಯ ಶಶಿಧರ ಕುಮಾರ್, ಮಂಜೇಶ್ವರ ಎಸ್ ಸಿ ಡಿ ಒ ತಿರುಮಲೇಶ್ವರ ಶುಭಾಶಂಸನೆಗೈಯುವರು. ಬ್ಲಾಕ್ ಅಭಿವೃದ್ದಿ ಅಧಿಕಾರಿ ನಂದಗೋಪಾಲ ಕೆ, ಪಂಚಾಯತಿ ಕಾರ್ಯದರ್ಶಿ ಹಂಸಾ ಉಪಸ್ಥಿತರಿರುವರು.