ಮೈಕ್ರೋಸಾಪ್ಟ್ ಕೃತಕ ಬುದ್ಧಿಮತ್ತೆಯನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಸರ್ಫೇಸ್ ಪ್ರೊ. 10 ಮತ್ತು ಸರ್ಪೇಸ್ ಲ್ಯಾಪ್‍ಟಾಪ್ 6 ಕಂಪನಿಯು ಹೊಸದಾಗಿ ಬಿಡುಗಡೆ ಮಾಡಿದ ಎಐ ಕಂಪ್ಯೂಟರ್ ಮಾದರಿಗಳಾಗಿವೆ. ಇದು ವ್ಯಾಪಾರ ಉದ್ದೇಶಕ್ಕಾಗಿ ಪ್ರತ್ಯೇಕವಾಗಿ ಪರಿಚಯಿಸಲಾದ ಮೊದಲ ಮಾದರಿಯಾಗಿದೆ.
ಮೈಕ್ರೋಸಾಪ್ಟ್‍ನ ಹೊಸ ಮಾದರಿಗಳಲ್ಲಿ ಮೈಕ್ರೋಸಾಪ್ಟ್‍ನ ಚಾಟ್‍ಬಾಟ್ ಕಾಪಿಲೋಟ್ ಆಧಾರಿತ ಕೀಗಳು, ಎಐ ಅನುಭವಗಳನ್ನು ನೀಡಲು ಸಂಯೋಜಿತ ನರ ಸಂಸ್ಕರಣಾ ಘಟಕಗಳು ಮತ್ತು ಹೊಸ ಇಂಟೆಲ್ ಕೋರ್ ಅಲ್ಟ್ರಾ ಪ್ರೊಸೆಸರ್‍ಗಳು ಸೇರಿವೆ. ಇಂಟೆಲ್ ಪ್ಲಾಟ್‍ಫಾರ್ಮ್‍ನಲ್ಲಿ ಮೈಕ್ರೋಸಾಪ್ಟ್ ್ಟ 5ಜಿ ಅನ್ನು ವಿತರಿಸುವ ಮೊದಲನೆಯದು ಎಂದು ಕಂಪನಿಯು ಘೋಷಿಸಿದೆ.
ಸರ್ಪೇಸ್ ಪ್ರೊ 10 ಎರಡು ರೀತಿಯ ಪ್ರೊಸೆಸರ್‍ಗಳಲ್ಲಿ ಲಭ್ಯವಿರುತ್ತದೆ. ಅವುಗಳೆಂದರೆ ಕೋರ್ ಅಲ್ಟ್ರಾ 5 135 ಯು ಮತ್ತು ಕೋರ್ ಅಲ್ಟ್ರಾ 7 165 ಯು. ಮೂಲ ಮಾದರಿಯು 8 ಜಿಬಿ ರಾಂ ಅನ್ನು ಹೊಂದಿದೆ. 64 ಜಿಬಿ ವರೆಗೆ ಕಾನ್ಫಿಗರ್ ಮಾಡಬಹುದು. 256ಜಿಬಿ ಜಿಇಎನ್ 4 ಎಸ್.ಎಸ್.ಡಿ. ಸಹ ನೀಡಲಾಗುತ್ತದೆ. 13-ಇಂಚಿನ ಡಿಸ್ಪ್ಲೇ ವಿರೋಧಿ ಪ್ರತಿಫಲಿತ ಲೇಪನವನ್ನು ಬಳಸಲಾಗಿದೆ. ಇದು 114 ಡಿಗ್ರಿ ಫೀಲ್ಡ್ ಆಫ್ ವ್ಯೂ ಮತ್ತು ಎನ್‍ಎಫ್‍ಸಿ ರೀಡರ್‍ನೊಂದಿಗೆ ಮುಂಭಾಗದ ಕ್ಯಾಮೆರಾವನ್ನು ಸಹ ಹೊಂದಿದೆ. 19 ಗಂಟೆಗಳ ಕಾಲ ಬ್ಯಾಟರಿ ಬಾಳಿಕೆ ಬರಲಿದೆ ಎಂದು ಕಂಪನಿ ಹೇಳಿಕೊಂಡಿದೆ.
ಸರ್ಪೇಸ್ ಲ್ಯಾಪ್‍ಟಾಪ್ 6 ಕೋರ್ ಅಲ್ಟ್ರಾ 5 135 ಎಚ್ ಮತ್ತುÉ್ಕೂೀರ್ ಅಲ್ಟ್ರಾ 7 165 ಎಚ್. ಪ್ರೊಸೆಸರ್‍ಗಳಿಂದ ಚಾಲಿತವಾಗಿದೆ. 8 ಜಿಬಿ ರಾಂ ಮತ್ತು 256 ಜಿಬಿ ಜಿಇಎನ್ 4 ಎಸ್.ಎಸ್.ಡಿ ಇದೆ. 15-ಇಂಚಿನ ಮಾದರಿಯು ಎರಡು ಯು.ಎಸ್.ಬಿ ಟೈಪ್-ಸಿ ಥಂಡರ್ ಬೋಲ್ಟ್ 4 ಪೋರ್ಟ್‍ಗಳನ್ನು ಹೊಂದಿರುತ್ತದೆ ಮತ್ತು 13.5-ಇಂಚಿನ ಮಾದರಿಯು ಒಂದೇ ಯು.ಎಸ್.ಬಿ. ಟೈಫ್ ಸಿ-ಥಂಡರ್ ಬೋಲ್ಟ್ 4 ಪೋರ್ಟ್ ಅನ್ನು ಹೊಂದಿರುತ್ತದೆ. ಈ ಮಾದರಿಗಳನ್ನು ಕಾಪಿಲೋಟ್‍ಗಾಗಿ ತಯಾರಿಸಲಾಗುತ್ತದೆ.