ತಿರುವನಂತಪುರ : 'ಕ್ಯಾನ್ಸರ್‌ನಿಂದ ಬಳಲಿದ್ದ ನಾನು, ಇದೀಗ ಸಂಪೂರ್ಣ ಗುಣಮುಖನಾಗಿದ್ದೇನೆ' ಎಂದು ಇಸ್ರೊ ಅಧ್ಯಕ್ಷ ಎಸ್.ಸೋಮನಾಥ್ ಹೇಳಿದ್ದಾರೆ.
ತಿರುವನಂತಪುರ : 'ಕ್ಯಾನ್ಸರ್‌ನಿಂದ ಬಳಲಿದ್ದ ನಾನು, ಇದೀಗ ಸಂಪೂರ್ಣ ಗುಣಮುಖನಾಗಿದ್ದೇನೆ' ಎಂದು ಇಸ್ರೊ ಅಧ್ಯಕ್ಷ ಎಸ್.ಸೋಮನಾಥ್ ಹೇಳಿದ್ದಾರೆ.
'ನನಗೆ ಕ್ಯಾನ್ಸರ್ ಇದೆ ಎಂಬುದು ದೇಶದ ಮೊದಲ ಸೌರ ಅಧ್ಯಯನ ಯೋಜನೆಯ ಉಪಗ್ರಹ ಆದಿತ್ಯ ಎಲ್1 ಉಡಾವಣೆಯ ದಿನದಂದೇ ಪತ್ತೆಯಾಗಿತ್ತು.
'ಚಂದ್ರಯಾನ-3 ಯೋಜನೆ ಸಮಯದಲ್ಲೇ ನನ್ನ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ಆದರೆ ಸಮಸ್ಯೆ ಏನೆಂಬುದು ಸ್ಪಷ್ಟವಾಗಿರಲಿಲ್ಲ. ಆದಿತ್ಯ ಎಲ್1 ಉಪಗ್ರಹ ಉಡಾವಣೆಯ ಬೆನ್ನಲ್ಲೇ ಚೆನ್ನೈನಲ್ಲಿ ಆರೋಗ್ಯ ಪರೀಕ್ಷೆಗೆ ಒಳಗಾದೆ. ದೊಡ್ಡ ಕರುಳಿನಲ್ಲಿ ಗೆಡ್ಡೆ ಇರುವುದು ಪತ್ತೆಯಾಗಿದೆ' ಎಂದು ಹೇಳಿದ್ದಾರೆ.