ನವದೆಹಲಿ: ಪ್ಲೇ ಸ್ಟೋರ್‌ನಿಂದ ತೆಗೆಯಲಾಗಿರುವ ಭಾರತೀಯ ಆಯಪ್‌ಗಳನ್ನು ಮರುಸೇರ್ಪಡೆಗೊಳಿಸಲು ಗೂಗಲ್ ಸಂಸ್ಥೆ ಒಪ್ಪಿಗೆ ಸೂಚಿಸಿದೆ ಎಂದು ಮಾಹಿತಿ ತಂತ್ರಜ್ಞಾನ ಮತ್ತು ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಪಾವತಿ ವಿವಾದವನ್ನೂ ಬಗೆಹರಿಸಲು ಯತ್ನಿಸುವುದಾಗಿಯೂ ಅವರು ಹೇಳಿದ್ದಾರೆ.

ಗೂಗಲ್ ಮತ್ತು ಸ್ಟಾರ್ಟಪ್‌ಗಳು ಈ ಕುರಿತಂತೆ ಸರ್ಕಾರದ ಜೊತೆ ಹಲವು ಸುತ್ತಿನ ಮಾತುಕತೆ ನಡೆಸಿವೆ. ಈ ಹಿನ್ನೆಲೆಯಲ್ಲಿ ಪ್ಲೇ ಸ್ಟೋರ್‌ನಿಂದ ತೆಗೆದಿರುವ ಭಾರತೀಯ ಆಯಪ್‌ಗಳನ್ನು ಸೇರ್ಪಡೆ ಮಾಡಲು ಗೂಗಲ್ ಒಪ್ಪಿದೆ ಎಂದು ಅವರು ಹೇಳಿದ್ದಾರೆ.
'ಗೂಗಲ್ ಸಂಸ್ಥೆಯು ನಮ್ಮ ತಂತ್ರಜ್ಞಾನ ಅಭಿವೃದ್ಧಿಯನ್ನು ಬೆಂಬಲಿಸುತ್ತಿದೆ. ಮುಂದಿನ ದಿನಗಳಲ್ಲಿ ಗೂಗಲ್ ಮತ್ತು ಸ್ಟಾರ್ಟಪ್ ಕಂಪನಿಗಳು ದೀರ್ಘಾವಧಿಯ ಪರಿಹಾರ ಕಂಡುಕೊಳ್ಳಲಿವೆ' ಎಂದು ಭಾವಿಸುತ್ತೇನೆ ಎಂದೂ ಅವರು ಹೇಳಿದ್ದಾರೆ.
ಸಂಸ್ಥೆಯ ಪಾವತಿ ಮಾರ್ಗಸೂಚಿಯನ್ನು ಪಾಲಿಸದ ಹಿನ್ನೆಲೆಯಲ್ಲಿ ಮಾರ್ಚ್ 1 ರಂದು bharat Matrimony, jeevansathi, Naukri, 99 acres ಸೇರಿ 100 ಆಯಪ್‌ಗಳನ್ನು ಗೂಗಲ್ ತನ್ನ ಪ್ಲೇ ಸ್ಟೋರ್‌ನಿಂದ ತೆಗೆದುಹಾಕಿತ್ತು.