ಕಾಸರಗೋಡು: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬಂಧನ, ಕೇರಳದಲ್ಲಿನ ಎಡರಂಗ ಹಾಗೂ ಐಕ್ಯ ರಂಗದ ನೆತಾರರಲ್ಲಿ ತಳಮಳ ಸೃಷ್ಠಿಸಿರುಗವುದಾಗಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಪಿ.ಕೆ ಕೃಷ್ಣದಾಸ್ ತಿಳಿಸಿದ್ದಾರೆ.
ಅವರು ಕಾಸರಗೋಡು ಪ್ರೆಸ್‍ಕ್ಲಬ್‍ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ಎನ್‍ಡಿಎ ವಿರುದ್ಧ ಸೆಣಸಲು ಅಸ್ತಿತ್ವಕ್ಕೆ ಬಂದಿರುವ ಪ್ರತಿಪಕ್ಷಗಳ ಒಕ್ಕೂ ಐಎನ್‍ಡಿಐಎ(ಇಂಡಿಯಾ)ಇಂದು ಭ್ರಷ್ಟಾಚಾರಿಗಳ ಒಕ್ಕೂಟವಾಗಿ ಬದಲಾಗಿದೆ. ಕೇಜ್ರಿವಾಲ್ ಬಂಧನ ಖಂಡಿಸಿ, ದೆಹಲಿಯಲ್ಲಿ ನಡೆದಿರುವ ಪ್ರತಿಭಟನೆಯ ನಂತರ ಅತೀ ಹೆಚ್ಚಿನ ವಿರೋಧ ಕೇರಳದಲ್ಲಿ ನಡೆದಿದೆ. ಆಡಳಿತ ಎಡರಂಗ ಹಾಗೂ ಪ್ರಮುಖ ಪ್ರತಿಪಕ್ಷ ಐಕ್ಯರಂಗ ಭ್ರಷ್ಟಾಚಾರ ಪೋಷಣೆಯಲ್ಲಿ ವೈರತ್ವ ಮರೆತು ಕೇರಳದಲ್ಲಿ ಒಂದಾಗಿ ಪ್ರತಿಭಟನೆ ನಡೆಸುತ್ತಿದೆ. ಮುಂದಿನ ದಿನಗಳಲ್ಲಿ ಕೇಜ್ರಿವಾಲ್‍ಗೆ ಸಂಭವಿಸಿರುವ ಅದೇ ಗತಿ ತಮಗೂ ಬರಬಹುದು ಎಂಬ ಭೀತಿಯಲ್ಲಿ ಉಭಯ ರಂಗಗಳು ಚಿಂತಾಕ್ರಾಂತದಿಂದ ಕಾಳ ಕಳೆಯುತ್ತಿದೆ. ಕೇರಳದಲ್ಲಿ ಸಿಪಿಎಂನ ಭ್ರಷ್ಟಾಚಾರ ವಿಷಯವನ್ನು ಕಾಂಗ್ರೆಸ್ ನೇತೃತ್ವದ ಐಕ್ಯರಂಗ ಎಲ್ಲಿಯೂ ಚುನಾವಣಾ ವಿಷಯವನ್ನಾಗಿ ಎತ್ತಿಕೊಂಡು ಪ್ರಚಾರ ನಡೆಸುತ್ತಿಲ್ಲ. ಇಂತಹ ಒಕ್ಕೂಟ ದೇಶವನ್ನು ಯಾವ ದುಸ್ಥಿತಿಗೆ ಕೊಂಡೊಯ್ಯಲಿದೆ ಎಂಬುದು ಇದರಿಂದ ಸಾಬೀತಾಗುತ್ತಿದೆ. ಸಹಕಾರಿ ಇಲಾಖೆಯಲ್ಲಿ ರಾಜ್ಯದಲ್ಲಿ ನಡೆದಿರುವ ಭ್ರಷ್ಟಾಚಾರದಲ್ಲಿ ಉಭಯ ರಂಗಗಳೂ ಪಾಲುದಾರರಾಗಿದ್ದಾರೆ. ಇನ್ನು ಕೇರಳ ಸರ್ಕಾರ ಕೆ-ರೈಸ್ ಯೋಜನೆಯಲ್ಲಿ ಕೋಟ್ಯಂತರ ರೂ. ಖಜಾನೆಗೆ ನಷ್ಟವನ್ನುಂಟುಮಾಡಿದೆ. ಇದೊಂದು ಜಾಗತಿಕ ಭ್ರಷ್ಟಾಚಾರವಾಗಿದ್ದು, ಈ ಬಗ್ಗೆ ವಿಜಿಲೆನ್ಸ್ ತನಿಖೆ ನಡೆಸಬೇಕಾದ ಅಗತ್ಯವಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಎ. ಸಂಪತ್, ವಕೀಲ ಎಂ. ನಾರಾಯಣ ಭಟ್, ವಿಜಯ ಕುಮಾರ್ ರೈ, ಬಿಡಿಜೆಎಸ್‍ನ ಗಣೇಶ್ ಪಾರೆಕಟ್ಟ ಉಪಸ್ಥಿತರಿದ್ದರು.