ಕುಂಬಳೆ: ಪೆರ್ಮುದೆ ಸೈಂಟ್ ಲಾರೆನ್ಸ್ ದಿ ಮಾರ್ಟಿರ್ ಇಗರ್ಜಿಯಲ್ಲಿ ಗರಿಗಳ ಭಾನುವಾರದ ಅಂಗವಾಗಿ ದಿವ್ಯಬಲಿಪೂಜೆ ನಡೆಯಿತು. ಬೆಳಿಗ್ಗೆ ಗರಿಗಳ ಆಶೀರ್ವಚನ ನೆರವೇರಿಸಿದ ಬಳಿಕ ಜೆರುಸಲೇಮ್‍ಗೆ ವಿಜಯ ಪ್ರವೇಶಗೈದ ಯೇಸುವನ್ನು ಸ್ಮರಿಸಿ ಮೆರವಣಿಗೆಯ ಮೂಲಕ ಹೋಸಾನ್ನ ಸ್ತುತಿಯೊಂದಿಗೆ ಭಕ್ತರು ದೇವಾಲಯಕ್ಕೆ ಪ್ರವೇಶಿಸಿದರು. ದಿವ್ಯಬಲಿಪೂಜೆ ಸಂದರ್ಭ ಯೇಸುವಿನ ಅಂತ್ಯಕ್ಷಣದ ಯಾತನೆಯ ಕಥೆಯನ್ನು ಆಲಿಸಲಾಯಿತು. ಇಗರ್ಜಿಯ ಧರ್ಮಗುರು ಫಾ. ಹೆರಾಲ್ಡ್ ಡಿಸೋಜ, ಸಹಾಯಕ ಧರ್ಮಗುರು ಫಾ. ಕ್ಲೋಡ್ ಕೋರ್ಡಾ ವಿವಿಧ ವಿಧಿವಿಧಾನಗಳಿಗೆ ನೇತೃತ್ವ ನೀಡಿದರು.