ಸುಬ್ರಹ್ಮಣ್ಯ: ಕಡಬ ತಾಲ್ಲೂಕಿನ ಸುಬ್ರಹ್ಮಣ್ಯ ಸಮೀಪದ ಐನೆಕಿದು ಗ್ರಾಮದ ಕಾಡಿನಂಚಿನ ಮನೆಯೊಂದಕ್ಕೆ ನಾಲ್ಕೈದು ಮಂದಿಯ ತಂಡವೊಂದು ಶನಿವಾರ ಭೇಟಿ ನೀಡಿ ಅಕ್ಕಿಯನ್ನು ಪಡೆದು ಕಾಡಿನತ್ತ ತೆರಳಿದೆ. ಭೇಟಿ ನೀಡಿದ ತಂಡವು ನಕ್ಸಲರದು ಇರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ.

'ಶನಿವಾರ ಸಂಜೆ 6 ಗಂಟೆ ಸುಮಾರಿಗೆ ತುಂತುರು ಮಳೆಯಾಗುತ್ತಿದ್ದ ಸಂದರ್ಭದಲ್ಲಿ ತಂಡವು ಐನೆಕಿದು ಗ್ರಾಮದ ಅರಣ್ಯದಂಚಿನ ತೋಟದ ಮೂಲಕ ಸಾಗಿತ್ತು. ತೋಟದ ಕೆಲಸದವರ ಶೆಡ್‌ಗೂ ಭೇಟಿ ನೀಡಿತ್ತು. ಅಲ್ಲಿದ್ದ ಕೆಲಸದಾಳು ಶೆಡ್‌ನ ಬಾಗಿಲು ಹಾಕಿದ್ದ. ಬಳಿಕ ಆ ತಂಡ ಅಲ್ಲೇ ಪಕ್ಕದಲ್ಲಿನ ತೋಟದ ಮಾಲಿಕರ ಮನೆಗೆ ತೆರಳಿ ಮನೆಗೆ ತೆರಳಿತ್ತು. ತಂಡದಲ್ಲಿದ್ದವರು ಮನೆಯವರ ಜೊತೆ ಸುಮಾರು ಒಂದು ಗಂಟೆ ಮಾತನಾಡಿದ್ದರು. ಮನೆಯಿಂದ 2 ಕೆ.ಜಿ.ಯಷ್ಟು ಅಕ್ಕಿ ಪಡೆದು ನಿರ್ಗಮಿಸಿದ್ದರು. ಅವರು ಕಾಡಿನತ್ತ ತೆರಳಿರುವ ಸಾಧ್ಯತೆ ಇದೆ' ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.
ಮನೆಯೊಳಗೆ ಮೂವರು ಮಾತ್ರ ಹೋಗಿದ್ದರು. ಆದರೆ, ತಂಡದಲ್ಲಿ ನಾಲ್ಕೈದು ಮಂದಿ ಇದ್ದರು. ಅವರ ಕೈಯಲ್ಲಿ ಕೋವಿಯಂತಹ ಪರಿಕರವನ್ನು ಬಟ್ಟೆ ಅಥವಾ ಯಾವುದೋ ವಸ್ತುವಿನಿಂದ ಸುತ್ತಿದ್ದರು. ಈ ಬಗ್ಗೆ ಸ್ಥಳೀಯರು ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ತೆರಳಿ ಮಾಹಿತಿ ಕಲೆ ಹಾಕಿದ್ದಾರೆ. ನಕ್ಸಲ್ ನಿಗ್ರಹ ದಳದ ಸಿಬ್ಬಂದಿಯೂ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ತಂಡವು ಭೇಟಿ ನೀಡಿದ್ದ ಮನೆಯವರಿಂದ ಮಾಹಿತಿ ಪಡೆದಿದ್ದಾರೆ ಎಂದು ಗೊತ್ತಾಗಿದೆ.