ಮಲಪ್ಪುರಂ: ವಲಂಚೇರಿಯಲ್ಲಿ ಅಕ್ರಮ ಕ್ವಾರಿಯಿಂದ ಅಪಾರ ಪ್ರಮಾಣದ ಸ್ಪೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಘಟನೆಯಲ್ಲಿ ನಾಲ್ವರನ್ನು ಬಂಧಿಸಲಾಗಿದೆ.
ಸಾವಿರಾರು ಜಿಲೆಟಿನ್ ಕಡ್ಡಿಗಳು, ಡಿಟೋನೇಟರ್‍ಗಳು ಮತ್ತು ಸುರಕ್ಷತಾ ಪ್ಯೂಸ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಸ್ಪೋಟಕ ವಸ್ತುಗಳನ್ನು ಏಕೆ ಸಂಗ್ರಹಿಸಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ. ಮಲಪ್ಪುರಂ ಎಸ್‍ಪಿಗೆ ಸಿಕ್ಕ ಸುಳಿವು ಆಧರಿಸಿ ನಾಲ್ವರನ್ನು ಬಂಧಿಸಲಾಗಿದೆ.
ಕ್ವಾರಿಯಿಂದ ವಶಪಡಿಸಿಕೊಂಡದ್ದಲ್ಲದೆ, ಕ್ವಾರಿಗೆ ಸ್ಪೋಟಕಗಳನ್ನು ತಲುಪಿಸುತ್ತಿದ್ದ ವ್ಯಕ್ತಿಯ ಪಾಲಕ್ಕಾಡ್ ನಡುವಟ್ಟಂ ಮನೆಯಿಂದ ಬೃಹತ ಸ್ಪೋಟಕಗಳ ಸಂಗ್ರಹವನ್ನೂ ವಶಪಡಿಸಿಕೊಳ್ಳಲಾಗಿದೆ. ಸ್ವಾಮಿದಾಸನ್, ಕ್ವಾರಿ ಕಾರ್ಮಿಕರಾದ ಶಫಿ, ಉಣ್ಣಿಕೃಷ್ಣನ್ ಮತ್ತು ರವಿಯನ್ನು ಬಂಧಿಸಲಾಗಿದೆ. ಅವರನ್ನು ಪೋಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸ್ವಾಮಿದಾಸನ್ ಎಂಬಾತನೇ ಹಲವು ಕ್ವಾರಿಗಳಿಗೆ ಸ್ಪೋಟಕಗಳನ್ನು ರವಾನಿಸುತ್ತಿದ್ದ ಎಂದು ವರದಿಯಾಗಿದೆ.
ವಲಂಚೋರಿ ಕ್ವಾರಿಯಲ್ಲಿ ಮೊದಲ ತಪಾಸಣೆ ನಡೆಸಲಾಯಿತು. ಕಾರ್ಮಿಕರನ್ನು ವಶಕ್ಕೆ ಪಡೆದ ನಂತರ ಪೋಲೀಸರು ಕ್ವಾರಿಗೆ ಸ್ಪೋಟಕಗಳನ್ನು ತಲಪಿಸುತ್ತಿದ್ದ ಸ್ವಾಮಿದಾಸನನ್ನು ಕೇಂದ್ರೀಕರಿಸಿ ತನಿಖೆ ವಿಸ್ತರಿಸಲಾಯಿತು. ಸ್ವಾಮಿದಾಸನ್ ಮನೆಗೆ ತಲುಪಿದಾಗ ಇನ್ನಷ್ಟು ಸ್ಪೋಟಕಗಳು ಪತ್ತೆಯಾಗಿವೆ. ಆತ ಅಕ್ರಮವಾಗಿ ಮನೆಯಲ್ಲಿ ಸ್ಪೋಟಕಗಳನ್ನು ಇಟ್ಟುಕೊಂಡಿದ್ದ ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ.
ಜೆಲಾಟಿನ್ ಸ್ಟಿಕ್ 1124, ಡಿಟೋನೇಟರ್ 4000, ಎಲೆಕ್ಟ್ರಿಕ್ ಡಿಟೋನೇಟರ್ 3340 ಮತ್ತು ಸೇಪ್ಟಿ ಪ್ಯೂಸ್ 1820 ಮೊದಲಾದವುಗಳನ್ನು ವಶಪಡಿಸಿರುವುದಾಗಿ ವಲಂಚೆರಿ ಪೋಲೀಸರು ತಿಳಿಸಿದ್ದಾರೆ.