ತಿರುವನಂತಪುರಂ: ನಾಲ್ಕನೇ ತರಗತಿಯ ಎಲ್‍ಎಸ್‍ಎಸ್ ಸ್ಕಾಲರ್‍ಶಿಪ್ ಪರೀಕ್ಷೆ ಮತ್ತು 7ನೇ ತರಗತಿಯ ಯುಎಸ್‍ಎಸ್ ಸ್ಕಾಲರ್‍ಶಿಪ್ ಪರೀಕ್ಷೆ ಪ್ರಹಸನವಾಗಿದೆ ಎಂಬ ಆರೋಪ ಕೇಳಿಬಂದಿದೆ.
ಪೋಷಕರೊಬ್ಬರು ಹೇಳುವಂತೆ: ಅವರ ಮಗಳು ಪ್ರಸ್ತುತ ಪ್ಲಸ್ ಟು ಓದುತ್ತಿದ್ದಾಳೆ. ಕೆಳ ತರಗತಿಗಳಲ್ಲಿ ಪಡೆದಿರುವ ವಿದ್ಯಾರ್ಥಿ ವೇತನದ ಮೊತ್ತ ಇನ್ನೂ ಪೂರ್ಣ ಪ್ರಮಾಣದಲ್ಲಿ ಸಿಗಬೇಕಿದೆ. ಒಂದು ವರ್ಷ ಸತತವಾಗಿ ಸಿಕ್ಕಿತ್ತು. ಬಳಿಕ ಅದರ ಪತ್ತೆಯಿಲ್ಲ ಎಂದಿರುವರು. ಅದೇ ರೀತಿ ರಾಜ್ಯದಲ್ಲಿ ಹತ್ತಾರು ಸಾವಿರ ವಿದ್ಯಾರ್ಥಿಗಳಿಗೆ ವರ್ಷದಿಂದ ವೇತನ ಪಾವತಿಯಾಗಿಲ್ಲ.
ಮಕ್ಕಳು ಮತ್ತು ಪೋಷಕರ ಕಣ್ಣಿಗೆ ಮಣ್ಣೆರಚಲು ಬ್ಯಾಂಕ್ ಖಾತೆ ಸಂಖ್ಯೆಗಳನ್ನು ಕಾಲಕಾಲಕ್ಕೆ ಸಂಗ್ರಹಿಸಲಾಗುತ್ತದೆ. ಇದನ್ನು ಮಾತ್ರ ವಾರ್ಷಿಕವಾಗಿ ಮಾಡಲಾಗುತ್ತದೆ. ಈ ಮೊತ್ತವು ಶೀಘ್ರ ಬಿಡುಗಡೆಯಾಗಲಿದೆ ಎಂದು ತೋರುತ್ತಿದೆ ಎನ್ನುತ್ತಾರೆ. ವಿದ್ಯಾರ್ಥಿಗಳು ಮತ್ತು ಶಾಲೆಯ ಶೈಕ್ಷಣಿಕ ಗುಣಮಟ್ಟವನ್ನು ನಿರ್ಣಯಿಸುವ ವಿದ್ಯಾರ್ಥಿವೇತನ ಪರೀಕ್ಷೆಯನ್ನು ಅವಹೇಳನ ಮಾಡಬೇಡಿ. ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಹಲವು ವಿಷಯಗಳಲ್ಲಿ ಮಕ್ಕಳ ಹಕ್ಕುಗಳ ಆಯೋಗ ಮಧ್ಯಪ್ರವೇಶಿಸಿದ್ದರೂ ಸ್ಕಾಲರ್ ಶಿಪ್ ವಿಚಾರದಲ್ಲಿ ಮಧ್ಯಪ್ರವೇಶಿಸುತ್ತಿಲ್ಲ. ಮೊತ್ತವನ್ನು ಸರಿಯಾಗಿ ವಿತರಿಸಿ ಪರೀಕ್ಷೆಯ ಘನತೆ ಕಾಪಾಡಲು ಸರಕಾರ ಮುಂದಾಗಬೇಕು ಎಂಬುದು ಆಗ್ರಹಿಸಲಾಗಿದೆ.