ಕಾಸರಗೋಡು: ಚುನಾವಣಾ ಇಲಾಖೆಯೊಂದಿಗೆ ಮಾಧ್ಯಮಗಳು ನಿಕಟವಾಗಿ ಕೆಲಸ ಮಾಡಬೇಕಾಗಿದ್ದು, ಸಾರ್ವತ್ರಿಕ ಚುನಾವಣೆ ಸುಗಮವಾಗಿ ನಡೆಯಲು ಮತದಾರರಿಗೆ ಮಾಧ್ಯಮಗಳ ಪಾತ್ರ ಪ್ರಮುಖವಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ತಿಳಿಸಿದ್ದಾರೆ.
ಅವರು ಕಾಸರಗೋಡು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಆಯೋಜಿಸಲಾದ 'ಚುನಾವಣೆಯಲ್ಲಿ ಮಾಧ್ಯಮಗಳ ಪಾತ್ರ'ಎಂಬ ವಿಷಯದ ಕುರಿತು ಆಯೋಜಿಸಿದ್ದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಚುನಾವಣೆಯ ಮಹತ್ವದ ಬಗ್ಗೆ ಮಾಹಿತಿ, ಮತದಾರರಿಗೆ ತಿಳಿವಳಿಕೆ ನೀಡುವುದರ ಜತೆಗೆ ನೀತಿ ಸಂಹಿತೆ ಉಲ್ಲಂಘನೆಯಾದಲ್ಲಿ ತಕ್ಷಣಕ್ಕೆ ವರದಿ ನೀಡಲು ಮಾಧ್ಯಮಗಳು ಗಮನಹರಿಸಬೇಕು. ಮತದಾನ ಮುಗಿಯುವ ಮುನ್ನ ಎಕ್ಸಿಟ್ ಪೆÇೀಲ್ ಫಲಿತಾಂಶ ಪ್ರಕಟಿಸುವಾಗ ಮಾಹಿತಿಯ ಸತ್ಯಾಸತ್ಯತೆ ಮತ್ತು ವಸ್ತುನಿಷ್ಠತೆಯನ್ನು ಖಚಿತಪಡಿಸಿಕೊಳ್ಳಬೇಕು. ಜಿಲ್ಲಾ ಚುನಾವಣಾಧಿಕಾರಿಗಳು ಮಾಧ್ಯಮ ಪ್ರಮಾಣೀಕರಣ ಮತ್ತು ಮೇಲ್ವಿಚಾರಣಾ ಸಮಿತಿಯಿಂದ ಅನುಮೋದಿಸಲಾದ ಜಾಹೀರಾತುಗಳನ್ನು ಮಾತ್ರ ಬಳಸಿಕೊಳ್ಳಬೇಕು. ಪೆಯ್ಡ್ ಸುದ್ದಿ, ವ್ಯಕ್ತಿ ಹನನದಂತಹ ಸುದ್ದಿಗಳನ್ನು ಹೊರತುಪಡಿಸಬೇಕು ಎಂದು ತಿಳಿಸಿರು. ಸಮಾಜಿಕ ಮಾಧ್ಯಮಗಳು ಎಂಬ ವಿಷಯದಲ್ಲಿ ರಾಜ್ಯ ಮಾಸ್ಟರ್ ಟ್ರೈನರ್ ಬಿ.ಎನ್ ಸುರೇಶ್, ಮೀಡಿಯಾ ಸರ್ಟಿಫಿಕೇಶನ್ ಏಂಡ್ ಮೋನಿಟರಿಂಗ್ ಕಮಿಟಿ ಎಂಬ ವಿಷಯದಲ್ಲಿ ರಾಜ್ಯ ಮಾಸ್ಟರ್ ಟ್ರೈನರ್ ಸಜಿತ್ ಪಾಲೇರಿ ತರಗತಿ ನಡೆಸಿದರು.
ಸಮಾರಂಬದಲ್ಲಿ ತರಬೇತಿ ನೋಡಲ್ ಅಧಿಕಾರಿ, ಅಪರ ಜಿಲ್ಲಾಧಿಕಾರಿ ಸುಫಿಯಾನ್ ಅಹಮದ್, ತರಬೇತಿ ಸಹಾಯಕ ನೋಡಲ್ ಅಧಿಕಾರಿ ಕೆ.ಬಾಲಕೃಷ್ಣನ್, ಜಿಲ್ಲಾಮಾಹಿತಿ ಅಧಿಕಾರಿ ಎಂ.ಮಧುಸೂದನನ್, ಜಿಲ್ಲಾ ಕಾನೂನು ಅಧಿಕಾರಿ ಕೆ.ಮುಹಮ್ಮದ್ ಕುಞÂ, ಕಾಲೇಜು ಶಿಕ್ಷಣ ಇಲಾಖೆ ನಿವೃತ್ತ ಉಪನಿರ್ದೇಶಕ ಪೆÇ್ರ.ವಿಗೋಪಿನಾಥ್ ಉಪಸ್ಥಿತರಿದ್ದರು. ತರಬೇತಿ ಕಾರ್ಯಕ್ರಮದಲ್ಲಿ ಜಿಲ್ಲೆಯ ಪತ್ರಕರ್ತರು ಭಾಗವಹಿಸಿದ್ದರು.