ಸಮರಸ ಚಿತ್ರಸುದ್ದಿ: ಉಪ್ಪಳ: ಮಂಜೇಶ್ವರ ಬಿ.ಆರ್.ಸಿಯಲ್ಲಿ ಹಲವು ವರ್ಷ ಬಿ.ಪಿ.ಒ ಆಗಿ ಸೇವೆ ಸಲ್ಲಿಸಿ ಇದೀಗ ಕುಂಬಳೆ ಜಿ.ಎಸ್.ಬಿ.ಎಸ್ ವಿದ್ಯಾ ಸಂಸ್ಥೆಗೆ ಮುಖ್ಯ ಶಿಕ್ಷಕರಾಗಿ ಭಡ್ತಿ ಹೊಂದಿದ ವಿಜಯಕುಮಾರ ಪಾವಳ ಅವರನ್ನು ಮುಳಿಂಜ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ವೃಂದ ಗೌರವಿಸಿತು. ಶಾಲಾ ಮುಖ್ಯ ಶಿಕ್ಷಕಿ ಚಿತ್ರಾವತಿ ಚಿಗುರುಪಾದೆ ಸ್ಮರಣಿಕೆಯನ್ನಿತ್ತು ಸನ್ಮಾನಿಸಿಸಿದರು. ಹಿರಿಯ ಶಿಕ್ಷಕ ಇಸ್ಮಾಯಿಲ್ ಮೀಯಪದವು ಸ್ವಾಗತಿಸಿ, ರಿಯಾಸ್ ಯಂ.ಯಸ್ ವಂದಿಸಿದರು.