ಅಬ್ಬಾ ಏನು ಬಿಸಿಲ ಉರಿ, ಇನ್ನೂ ಒಂದು ಮಳೆ ಬಂದಿಲ್ಲ, ಸಾಮಾನ್ಯವಾಗಿ ಇಷ್ಟು ಸಮಯಕ್ಕೆ ಒಂದು ಅಥವಾ ಎರಡು ಮಳೆ ಬಂದಿರುತ್ತದೆ, ಆದರೆ ಈ ವರ್ಷ ನದಿಗಳು, ಕೊಳಗಳು, ಬೋರ್‌ವೆಲ್‌ಗಳು ಬತ್ತುತ್ತಿವೆ, ಕೃಷಿಗೆ ನೀರಿಲ್ಲ, ಕುಡಿಯೋಕೆ, ಮನೆ ಬಳಕೆಗೆ ನೀರಿಲ್ಲ...
ಉರಿ ಬಿಸಿಲಿನಲ್ಲಿ ಸ್ವಲ್ಪ ಹೊತ್ತು ಹೊರಗಡೆ ಓಡಾಡಿದರೆ ಸುಸ್ತಾಗುತ್ತೇವೆ, ಅಷ್ಟೊಂದು ತೀವ್ರ ಬಿಸಿಲು, ಇನ್ನು ಏಪ್ರಿಲ್, ಮೇ ತಿಂಗಳು ಊಹಿಸಲೂ ಭಯವಾಗುತ್ತೆ. ಈ ಉರಿ ಬಿಸಿಲಿನ ಸಮಯದಲ್ಲಿ ಆರೋಗ್ಯದ ಕಡೆಗೆ ತುಂಬಾನೇ ಗಮನಹರಿಸಬೇಕು. ಈ ಬಿಸಿಲಿನ ತೀವ್ರತೆ ಹೆಚ್ಚಾಗಿರುವುದರಿಂದ ಯಾರು ಹೆಚ್ಚು ಜಾಗ್ರತೆವಹಿಸಬೇಕು. ಮೈಯನ್ನು ತಂಪಾಗಿಡಲು ಏನು ಮಾಡಬೇಕು ಎಂದು ನೋಡೋಣ ಬನ್ನಿ:ಬಿಸಿಲಿನ ಧಗೆ ಹೆಚ್ಚಾದಾಗ ಯಾರಿಗೆ ಹೆಚ್ಚು ಅಪಾಯಕಾರಿ?
60 ವರ್ಷ ಮೇಲ್ಪಟ್ಟವರು, ಮಕ್ಕಳು, 5 ವರ್ಷದ ಕೆಳಗಿನ ಮಕ್ಕಳು
ಆರೋಗ್ಯ ಸಮಸ್ಯೆ ಇರುವವರು, ಹೃದಯ ಸಮಸ್ಯೆ, ಶ್ವಾಸಕೋಶದ ಸಮಸ್ಯೆ, ಮಧುಮೇಹದ ಸಮಸ್ಯೆ
ಕೆಲವೊಂದು ಕಾಯಿಲೆಗೆ ಔಷಧಿ ತೆಗೆಯುತ್ತಿದ್ದರೆ
ಬಿಸಿಲಿನಲ್ಲಿ ಕೆಲಸ ಮಾಡುತ್ತಿದ್ದರೆ ( ಕಟ್ಟಡ ಕೆಲಸ, ರೋಡ್ ಕೆಲಸ ಹೀಗೆ ಬಿಸಿಲಿನಲ್ಲಿ ನಿಂತು ಕೆಲಸ ಮಾಡುತ್ತಿದ್ದರೆ)
ಬೇಸಿಗೆಯಲ್ಲಿ ಆರೋಗ್ಯವನ್ನು ಕಾಪಾಡುವುದು ಹೇಗೆ?
ತುಂಬಾನೇ ನೀರು ಕುಡಿಯಬೇಕು
ಮದ್ಯಪಾನ ಮಾಡಬೇಡಿ, ತಂಪು ಪಾನೀಯ ಸೇವಿಸಬೇಡಿ
ಹೊರಗಡೆ ಹೀಗುವಾಗ ನೀರು ತಗೊಂಡು ಹೋಗಿ
ದೇಹವನ್ನು ತಂಪಾಗಿ ಇಡುವುದು ಹೇಗೆ?
ಸಾಕಷ್ಟು ನೀರು ಕುಡಿಯಿರಿ
ಹಣ್ಣುಗಳನ್ನು ಸೇವಿಸಿ
ಎಳನೀರು ಸೇವಿಸಿ
ತಣ್ಣೀರಿನಲ್ಲಿ ಸ್ನಾನ ಮಾಡಿ
ಹೊರಗಡೆ ಸನ್‌ಸ್ಕ್ರೀನ್ ಹಚ್ಚಿ
ಬಿಸಿಲಿನಲ್ಲಿ ಕೆಲಸ ಮಾಡಬೇಡಿ, ಅದೇ ಕೆಲಸವನ್ನು ಬೆಳಗ್ಗೆ ಹಾಗೂ ಮಧ್ಯಾಹ್ನ 3 ಗಂಟೆಯ ಮೇಲೆ ಕೆಲಸ ಮಾಡಿ.
ಮನೆಯನ್ನು ತಂಪಾಗಿ ಇಡಿ
ಕಿಟಕಿಗೆ ಕರ್ಟನ್ ಹಾಕಿ
ಹೇರ್ ಕಂಡೀಷನರ್ ಇಲ್ಲದಿದ್ದರೆ ಮನೆಯೊಳಗಡೆ ಗಾಳಿಯಾಡುವಂತಿರಬೇಕು
ಮನೆಯಲ್ಲಿ ಒಲೆ ಅಥವಾ್ ಸ್ಟೌವ್ ಅನ್ನು ಬಳಸುವ ಬದಲಿಗೆ ರಾತ್ರಿ ಬಳಸಿ, ಇದರಿಂದ ಮನೆಯೊಳಗಡೆ ಸೆಕೆ ಹೆಚ್ಚಾಗುವುದನ್ನು ತಡೆಗಟ್ಟಬಹುದು.
ಮಕ್ಕಳಿಗೆ ನೀರು ಕುಡಿಯಲು ಹೇಳಿ, ಜ್ಯೂಸ್ ಕೊಡಿ
ಮಕ್ಕಳನ್ನು, ನಾಯಿ, ಬೆಕ್ಕನ್ನು ಕಾರಿನೊಳಗಡೆ ಬಿಟ್ಟು ಹೋಗಬೇಡಿ
ಮನೆಯ ಹೊರಗಡೆ, ಟೆರೇಸ್‌ನಲ್ಲಿ ಪ್ರಾಣಿ, ಪಕ್ಷಿಗಳಿಗೆ ನೀರಿಡಿ.
ದೇಹದಲ್ಲಿ ನೀರಿನಂಶ ಕಡಿಮೆಯಾದರೆ ಕಂಡು ಬರುವ ಲಕ್ಷಣಗಳು
ತಲೆಸುತ್ತುವುದು'
ಸುಸ್ತು
ಬಾಯಾರಿಕೆ
ಮೂತ್ರ ಹಳದಿ ಬಣ್ಣದಲ್ಲಿ ಇರುವುದು
ಹಸಿವು ಕಡಿಮೆ ಇರುವುದು
ತಲೆಸುತ್ತು
ದೇಹದಲ್ಲಿ ನೀರಿನಂಶ ಕಡಿಮೆಯಾದರೆ ಏನು ಮಾಡಬೇಕು?
ಸಾಕಷ್ಟು ನೀರು ಕುಡಿಯಬೇಕು
ಟೀ ಕುಡಿಯಬೇಡಿ
ಮದ್ಯಪಾನ ಮಾಡಬಾರದು
ಒಂದು ಸ್ಪ್ರೇ ಬಾಟಲಿನಲ್ಲಿ ನೀರು ತುಂಬಿ ಅದನ್ನು ಮುಖಕ್ಕೆ, ಕತ್ತಿಗೆ ಸ್ಪ್ರೇ ಮಾಡುತ್ತಾ ಇರಿ
ಹೀಟ್ ಕ್ರಾಂಪ್ಸ್ (ಬೇಸಿಗೆಯಲ್ಲಿ ಸ್ನಾಯು ಸೆಳೆತ)
ಬೇಸಿಗೆಯಲ್ಲಿ ಹೊರಗಡೆ ಕ್ರಿಕೆಟ್, ಮತ್ತಿತರ ಆಟವಾಡಿದಾಗ ಸ್ನಾಯು ಸೆಳೆತ ಉಂಟಾಗುವುದು, ಇದನ್ನು ತಡೆಗಟ್ಟಲು ಸಾಕಷ್ಟು ನೀರು ಕುಡಿಯಬೇಕು
ತಣ್ಣೀರಿನಲ್ಲಿ ಸ್ನಾನ ಮಾಡಿ
ತುಂಬಾನೇ ವರ್ಕೌಟ್ ಮಾಡಬೇಡಿ.
ಹೀಟ್ ಸ್ಟ್ರೋಕ್ ಲಕ್ಷಣಗಳೇನು?
ದೇಹದ ಉಷ್ಣಾಂಶ ಹೆಚ್ಚಾಗುವುದು
ತುಂಬಾನೇ ಬಾಯಾರಿಕೆ
ಎದೆ ಬಡಿತ ಹೆಚ್ಚಾಗುವುದು
ವಾಂತಿ
ತಲೆಸುತ್ತುವುದು
ವಿಚಿತ್ರ ವರ್ತನೆ
ಪಿಡ್ಸ್ ಬರುವುದು, ಪ್ರಜ್ಞೆ ತಪ್ಪುವುದು
ಬೇಸಿಗೆಯಲ್ಲಿ ವ್ಯಕ್ತಿ ತಲೆ ಸುತ್ತಿದರೆ ಏನು ಮಾಡಬೇಕು?
ತಂಪಾದ ಸ್ಥಳದಲ್ಲಿ ಅವರನ್ನು ಕೂರಿಸಿ
ಅವರಿಗೆ ಸ್ವಲ್ಪ ಪ್ರಜ್ಞೆ ಇದ್ದರೆ ನೀರು ಕೊಡಿ
ನಂತರ ಮುಖಕ್ಕೆ ಸ್ವಲ್ಪ ನೀರು ಹಾಕಿ
ಅವರ ತಲೆ, ಕಂಕುಳ, ಕಾಲಿಗೆ ನೀರನ್ನು ಬಟ್ಟೆಯಲ್ಲಿ ಅದ್ದಿ ಇಡಿ
ಈ ಸಮಯದಲ್ಲಿ ಯಾವುದೇ ಪ್ಯಾರಾಸಿಟಮೋಲ್ ಅಥವಾ ಆಸ್ಪಿರಿನ್ ನೀಡಬೇಡಿ.
ಬೇಸಿಗೆಯಲ್ಲಿ ಆರೋಗ್ಯದ ಬಗ್ಗೆ ತುಂಬಾನೇ ಜಾಗ್ರತೆವಹಿಸಿ, ಮಜ್ಜಿಗೆ ಸೇವಿಸಿ, ಎಳನೀರು ಸೇವಿಸಿ, ಹಣ್ಣುಗಳನ್ನು ಹೆಚ್ಚಾಗಿ ಬಳಸಿ, ಹೆಚ್ಚು ಖಾರದ ಆಹಾರ ಬಳಸಬೇಡಿ, ಬಟ್ಟೆ ಕೂಡ ಕಾಟನ್ ಬಟ್ಟೆ ಧರಿಸಿ, ಬಿಸಿಲಿನಲ್ಲಿ ಓಡಾಡುವಾಗ ಕೊಡೆ ಹಿಡಿಯಿರಿ.