ನವದೆಹಲಿ: ಸಾಮಾಜಿಕ ಮಾಧ್ಯಮ ಎಕ್ಸ್ (ಹಿಂದೆ ಟ್ವಿಟರ್) ಪ್ಲಾಟ್‌ಫಾರ್ಮ್ ಶೀಘ್ರದಲ್ಲೇ ಸ್ಟ್ರೀಮಿಂಗ್ ಸೇವೆಯನ್ನು ಒದಗಿಸಲಿದೆ ಎಂದು ಎಲೋನ್ ಮಸ್ಕ್ X(ಎಕ್ಸ್) ನಲ್ಲಿ ಘೋಷಿಸಿದರು,
ಎಲ್ಲವನ್ನೂ ಅಪ್ಲಿಕೇಶನ್' ಆಗಿ ಪರಿವರ್ತಿಸುವ ಪ್ರಯತ್ನದಲ್ಲಿ ಯೂಟ್ಯೂಬ್‌ನೊಂದಿಗೆ ಸಂಯೋಜಿಸಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ.
ಅವರು ಶನಿವಾರ ಘೋಷಿಸಿದಂತೆ ಎಕ್ಸ್ ವೇದಿಕೆಯು ಸ್ಟ್ರೀಮಿಂಗ್ ಸೇವೆಯನ್ನು ಪ್ರಾರಂಭಿಸಲು ಸಿದ್ಧವಾಗಿದೆ. ಇದರಿಂದ ಬಳಕೆದಾರರು ತಮ್ಮ ಸ್ಮಾರ್ಟ್ ಟಿವಿ ಪರದೆಗಳಲ್ಲಿ ದೀರ್ಘವಾದ ವೀಡಿಯೊಗಳನ್ನು ವೀಕ್ಷಿಸಲು ಸಾಧ್ಯವಾಗುತ್ತದೆ ಎಂದು ವಿವರಿಸಿದ್ದಾರೆ.
ಕಂಪನಿಯು ಅಮೆಜಾನ್ ಮತ್ತು ಸ್ಯಾಮ್‌ಸಂಗ್ ಸ್ಮಾರ್ಟ್ ಟಿವಿಗಳಿಗಾಗಿ ಟಿವಿ ಅಪ್ಲಿಕೇಶನ್ ಅನ್ನು ಪ್ರಾರಂಭಿಸುತ್ತಿದೆ. ಇದು ಶೀಘ್ರದಲ್ಲೇ ಬರಲಿದೆ ಎಂದು ಎಲೋನ್ ಮಸ್ಕ್ ಅವರು ಡಾಗ್ ಡಿಸೈನರ್ ಎಂಬ ಬಳಕೆದಾರನ ಎಕ್ಸ್ ನಲ್ಲಿನ ಪೋಸ್ಟ್‌ಗೆ ಉತ್ತರಿಸಿದರು. ಬಳಕೆದಾರರು ಶೀಘ್ರದಲ್ಲೇ ನಿಮ್ಮ ಮೆಚ್ಚಿನ ದೀರ್ಘ ಫಾರ್ಮ್ ನ ವೀಡಿಯೊಗಳನ್ನು ನೇರವಾಗಿ ನಿಮ್ಮ ಸ್ಮಾರ್ಟ್ ಟಿವಿ ಗಳಲ್ಲಿ ವೀಕ್ಷಿಸಬಹುದು ಎಂದು ಬರೆದಿದ್ದಾರೆ,
'ಜನರು ತಮ್ಮ ದೊಡ್ಡ ಪರದೆಯ ಟಿವಿಯಲ್ಲಿ ದೀರ್ಘ ವೀಡಿಯೊಗಳನ್ನು ಆರಾಮವಾಗಿ ವೀಕ್ಷಿಸಲು ಸಾಧ್ಯವಾಗುತ್ತದೆ ಎಂದು ನಾವು ಬಯಸುತ್ತೇವೆ. ಈಗಾಗಲೇ ನಿಮ್ಮ ಫೋನ್‌ನಿಂದ ನಿಮ್ಮ ಟಿವಿಗೆ ವೀಡಿಯೊಗಳನ್ನು ಪ್ಲೇ ಮಾಡಲು ಆಪಲ್ ಏರ್ ಪ್ಲೇ ಅನ್ನು ಬಳಸಬಹುದು' ಎಂದು ಮಸ್ಕ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ವೀಡಿಯೋ ಪ್ಲಾಟ್‌ಫಾರ್ಮ್‌ನಂತೆ ತನ್ನನ್ನು ತಾನು ಮರುರೂಪಿಸಿಕೊಳ್ಳುವ ಎಕ್ಸ್ನ ಕ್ರಮವು, ಡೊಮೇನ್‌ನಲ್ಲಿ ಎಕ್ಸ್ ಹೇಗೆ ದೊಡ್ಡ ಪ್ರತಿಸ್ಪರ್ಧೆ ನೀಡುತ್ತದೆ ಎಂಬುದರ ಕುರಿತು ಸಾಮಾಜಿಕ ಮಾಧ್ಯಮ ಬಳಕೆದಾರರಲ್ಲಿ ಪ್ರಶ್ನೆ ಮೂಡುವಂತಾಗಿದೆ.
'ಎಕ್ಸ್ ನೇರವಾಗಿ ಯೂಟ್ಯೂಬ್‌ನೊಂದಿಗೆ ಸ್ಪರ್ಧಿಸುತ್ತಿರುವುದನ್ನು ನೋಡಲು ಸಂತೋಷವಾಗಿದೆ. ಎಕ್ಸ್ ವಾಕ್ ಸ್ವಾತಂತ್ರ್ಯ ಹೊಂದಿರುವ ಪ್ರಮುಖ ಸಾಮಾಜಿಕ ಮಾಧ್ಯಮವಾಗಿದೆ ಎಂದು ಬಳಕೆದಾರರೊಬಗಬರು ಬರೆದಿದ್ದಾರೆ,
ಮತ್ತೊಬ್ಬರು ಪೋಸ್ಟ್ ಮಾಡಿ, 'ಈ ಅಪ್ಲಿಕೇಶನ್ ಎಷ್ಟು ದೂರ ಬಂದಿದೆ ಎಂದು ನಂಬುವುದು ಕಷ್ಟ. ನಿರಂತರವಾಗಿ ವಿಕಸನಗೊಳ್ಳುತ್ತಿರುವ ಡಿಜಿಟಲ್ ಮಾಧ್ಯಮದಲ್ಲಿ ಸ್ಪರ್ಧಿಸುವ ನಿಟ್ಟಿನಲ್ಲಿ ಕಾರ್ಯತಂತ್ರದ ಭಾಗವಾಗಿ ಇಟ್ಟಿರುವ ಹೆಜ್ಜೆ' ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಸ್ಮಾರ್ಟ್ ಟಿವಿ, ದೀರ್ಘ-ರೂಪದ ಬರವಣಿಗೆಯನ್ನು ಮೀರಿ ಎಕ್ಸ್ ವೀಡಿಯೊ ಗೇಮ್ ಮತ್ತು ಪಾಡ್‌ಕಾಸ್ಟ್‌ಗಳನ್ನು ಸಹ ಅನ್ವೇಷಿಸುತ್ತಿದೆ.
ಮತ್ತೊಂದೆಡೆ, ಎಕ್ಸ್ ಎಐ ಅಭಿವೃದ್ಧಿಪಡಿಸಿದ ಎಐ ಚಾಟ್‌ಬಾಟ್ ಗ್ರೋಕ್ ಟೆಕ್ ಕ್ಷೇತ್ರದ ಸುತ್ತ ಮಾತುಕತೆ ನಡೆಸುತ್ತಿದೆ. ಇತರ ಚಾಟ್‌ಬಾಟ್‌ಗಳಿಗಿಂತ ಭಿನ್ನವಾಗಿ, ಅಸಾಮಾನ್ಯ ಮತ್ತು ಪ್ರಚೋದನಕಾರಿ ಪ್ರಶ್ನೆಗಳಿಗೆ ಹಾಸ್ಯದ ಮತ್ತು ಬಂಡಾಯದ ಉತ್ತರಗಳೊಂದಿಗೆ ಪ್ರತಿಕ್ರಿಯಿಸಲು ಗ್ರೋಕ್ ಅನ್ನು ಪ್ರೋಗ್ರಾಮ್ ಮಾಡಲಾಗಿದೆ.