ತಿರುವನಂತಪುರಂ: ಕೇಂದ್ರ ಸರ್ಕಾರ ಅಂಗೀಕರಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ರಾಜ್ಯದ ಐದು ಸ್ಥಳಗಳಲ್ಲಿ ಸಿಪಿಎಂ ಆಯೋಜಿಸಿರುವ ರ್ಯಾಲಿಗಳನ್ನು ಉದ್ದೇಶಿಸಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಾತನಾಡಲಿದ್ದಾರೆ.
ಪೌರತ್ವಕ್ಕೆ ಧರ್ಮವೇ ಆಧಾರವಾಗಬಾರದು ಎಂಬ ಘೋಷವಾಕ್ಯವನ್ನು ಎತ್ತುವ ಮೂಲಕ ಮುಸ್ಲಿಮರ ಮತವನ್ನು ಗುರಿಯಾಗಿಟ್ಟುಕೊಂಡು ರ ್ಯಾಲಿ ನಡೆಸಲಾಗುತ್ತಿದೆ ಎಂದು ವಿಶ್ಲೇಶಿಸಲಾಗಿದೆ.
ಕೋಝಿಕ್ಕೋಡ್ ನಲ್ಲಿ ಇಂದು ಆರಂಭವಾಗಲಿರುವ ಕಾರ್ಯಕ್ರಮ 27ರಂದು ಕೊಲ್ಲಂ ಕ್ಷೇತ್ರದಲ್ಲಿ ಮುಕ್ತಾಯವಾಗಲಿದೆ. ಸಿಪಿಎಂ ಸ್ಪರ್ಧಿಸಿರುವ ಐದು ಕ್ಷೇತ್ರಗಳಲ್ಲಿ ಬೃಹತ್ ಸಮಾವೇಶಗಳನ್ನು ಆಯೋಜಿಸಲಾಗಿದೆ.
ಇಂದು ಕೋಝಿಕ್ಕೋಡ್‍ನಲ್ಲಿ ರ್ಯಾಲಿ ನಡೆಯಲಿದೆ. ಬಳಿಕ, ನಾಳೆ ಕಾಸರಗೋಡು ರ್ಯಾಲಿ ಆಯೋಜಿಸಲಾಗಿದೆ. 24 ರಂದು ಕಣ್ಣೂರು, 25 ರಂದು ಮಲಪ್ಪುರಂ ಮತ್ತು 27 ರಂದು ಕೊಲ್ಲಂನಲ್ಲಿ ರ್ಯಾಲಿಗಳಿವೆ.
ಮುಖ್ಯಮಂತ್ರಿಗಳ ಸಂಸದೀಯ ಕ್ಷೇತ್ರ ಮಟ್ಟದ ಚುನಾವಣಾ ಪ್ರಚಾರ ಕಾರ್ಯಕ್ರಮವನ್ನು ಮಾರ್ಚ್ 30 ರಿಂದ ಏಪ್ರಿಲ್ 22 ರವರೆಗೆ ನಿಗದಿಪಡಿಸಲಾಗಿದೆ.