ಕಾಸರಗೋಡು: ನಗರದ ರೈಲ್ವೆ ನಿಲ್ದಾಣದಲ್ಲಿ ರೈಲಿನಿಂದ ಬಿದ್ದು, ಗಂಭೀರ ಗಾಯಗೊಂಡಿದ್ದ ಮೂಲತ: ಚೆಮ್ನಾಡ್ ನಿವಾಸಿ, ಪ್ರಸಕ್ತ ಮಂಗಳೂರು ಬಲ್ಮಠದಲ್ಲಿ ವಾಸಿಸುತ್ತಿರುವ ಮಹಮ್ಮದ್ ಬಶೀರ್ ತುರ್ತಿ(63)ಮೃತಪಟ್ಟಿದ್ದಾರೆ. ಮಾ. 21ರಂದು ರೈಲಿನಿಂದ ಇಳಿಯುವ ಮಧ್ಯೆ ಫ್ಲ್ಯಾಟ್‍ಫಾರ್ಮ್‍ಗೆ ಬಿದ್ದು, ಗಂಭೀರ ಗಾಯಗೊಂಡಿದ್ದ ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಶುಕ್ರವಾರ ಮೃತಪಟ್ಟಿದ್ದಾರೆ.
ವಿದೇಶದಲ್ಲಿ ಉದ್ಯೋಗಿಯಾಗಿದ್ದರು. ವಾರದ ಹಿಂದೆ ಚೆಮ್ನಾಡಿನಲ್ಲಿರುವ ಇವರ ತಂದೆ ನಿಧನರಾಗಿದ್ದು, ತಂದೆ ಅಂತ್ಯಸಂಸ್ಕಾರ ಕಳೆದು ಮಂಗಳೂರಿಗೆ ವಾಪಸಾಗಿದ್ದರು. ಮತ್ತೆ 21ರಂದು ಚೆಮ್ನಾಡಿಗೆ ಆಗಮಿಸಲು ಮಂಗಳೂರು-ಕಣ್ಣೂರು ಮಧ್ಯೆ ಸಂಚರಿಸುವ ರೈಲಲ್ಲಿ ಆಗಮಿಸಿ ಇಳಿಯುವ ಮಧ್ಯೆ ಆಯತಪ್ಪಿ ಬಿದ್ದಿದ್ದರು.