ಪಾಲಕ್ಕಾಡ್: ಬಿಜೆಪಿ ಚುನಾವಣಾ ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ಪಾಲಕ್ಕಾಡ್‍ಗೆ ಭೇಟಿ ನೀಡಲಿದ್ದಾರೆ. ಚುನಾವಣಾ ದಿನಾಂಕ ಘೋಷಣೆಯಾದ ನಂತರ ಮೋದಿಯವರ ಮೊದಲ ಭೇಟಿ ಇದಾಗಿದೆ.
ಕೊಯಮತ್ತೂರಿನಲ್ಲಿ ಸಾರ್ವಜನಿಕ ಕಾರ್ಯಕ್ರಮದ ನಂತರ, ಬೆಳಿಗ್ಗೆ ಪಾಲಕ್ಕಾಡ್ ತಲುಪುವರು.
ಬೆಳಗ್ಗೆ 10 ಗಂಟೆಗೆ ಹೆಲಿಕಾಪ್ಟರ್ ಮೂಲಕ ಮರ್ಸಿ ಕಾಲೇಜ್ ಮೈದಾನಕ್ಕೆ ಬಂದಿಳಿಯುವ ಮೋದಿ, ಅಲ್ಲಿಂದ ಕಾರಿನಲ್ಲಿ ಕೊಟ್ಟಮೈದಾನ ತಲುಪಲಿದ್ದಾರೆ. ಮೈದಾನದ ಮುಂಭಾಗದ ಐದು ದೀಪಗಳ ಬಳಿಯಿಂದ ರೋಡ್ ಶೋ ಆರಂಭವಾಗಲಿದೆ. ಹೆಡ್ ಪೋಸ್ಟ್ ಆಫೀಸ್ ಬಳಿ ಕೊನೆಗೊಳ್ಳುತ್ತದೆ.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಪಾಲಕ್ಕಾಡ್ ಲೋಕಸಭಾ ಕ್ಷೇತ್ರದ ಉಸ್ತುವಾರಿ ಪಿ. ರಘುನಾಥ್, ಖಜಾಂಚಿ ಅಡ್ವ. ಇ. ಕೃಷ್ಣದಾಸ್, ಜಿಲ್ಲಾಧ್ಯಕ್ಷ ಕೆ.ಎಂ. ಹರಿದಾಸ್, ಜ. ಕಾರ್ಯದರ್ಶಿ ಪಿ. ವೇಣುಗೋಪಾಲ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಪಾಲಕ್ಕಾಡ್, ಪೆÇನ್ನಾನಿ ಮತ್ತು ಮಲಪ್ಪುರಂ ಕ್ಷೇತ್ರಗಳ ಎನ್‍ಡಿಎ ಅಭ್ಯರ್ಥಿಗಳಾದ ಸಿ. ಕೃಷ್ಣಕುಮಾರ್, ಅಡ್ವ. ನಿವೇದಿತಾ ಸುಬ್ರಮಣಿಯನ್, ಡಾ.ಎಂ. ಅಬ್ದುಲ್ ಸಲಾಂ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಜಾವಡೇಕರ್, ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಮತ್ತಿತರರು ಭಾಗವಹಿಸಲಿದ್ದಾರೆ.