ನವದೆಹಲಿ:ನಮ್ಮ ಪಕ್ಷವು ಇಂಡಿಯಾ ಮೈತ್ರಿಕೂಟದ ಬೆನ್ನಿಗೆ ದೃಢವಾಗಿ ನಿಂತಿದೆ ಎಂದು ಭರವಸೆ ನೀಡಿರುವ ಟಿಎಂಸಿ ನಾಯಕ ಡೆರೆಕ್ ಒ'ಬ್ರಿಯಾನ್, ಪುಲ್ವಾಮಾ ದಾಳಿಯ ಕುರಿತು ಶ್ವೇತಪತ್ರವನ್ನು ಬಿಡುಗಡೆ ಮಾಡಬೇಕು ಎಂದು ಕೇಂದ್ರ ಸರಕಾರವನ್ನು ಆಗ್ರಹಿಸಿದರು.

ದಿಲ್ಲಿಯ ರಾಮ್ ಲೀಲಾ ಮೈದಾನದಲ್ಲಿ ಆಯೋಜಿಸಲಾಗಿರುವ 'ಪ್ರಜಾತಂತ್ರ ಉಳಿಸಿ' ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಡೆರೆಕ್ ಒ'ಬ್ರಿಯನ್, "ನಮಗೆ ಸತ್ಯ ಹೊರ ಬರುವುದು ಬೇಕಿದೆ" ಎಂದು ಒತ್ತಿ ಹೇಳಿದರು.
ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, "ಇದು ಬಿಜೆಪಿ ಮತ್ತು ಭಾರತೀಯ ಪ್ರಜಾತಂತ್ರದ ನಡುವಿನ ಯುದ್ಧವಾಗಿದೆ" ಎಂದು ಬಣ್ಣಿಸಿದರು.
"ವೇದಿಕೆಯ ಮೇಲೆ ಎರಡು ಖಾಲಿ ಕುರ್ಚಿಗಳಿವೆ. ಅವು ಕೇಜ್ರಿವಾಲ್ ಮತ್ತು ಸೊರೇನ್ ಆಗಿದ್ದು, ನೀವು ನಮ್ಮ ಸ್ಫೂರ್ತಿ" ಎಂದು ಡೆರೆಕ್ ಒ'ಬ್ರಿಯನ್ ಹೇಳಿದರು.
"ಮೋದಿ ಗ್ಯಾರಂಟಿಯು ಶೂನ್ಯ ವಾರಂಟಿಯನ್ನು ಹೊಂದಿದೆ. ನಿರುದ್ಯೋಗ, ಹಣದುಬ್ಬರ, ಜನರ ಸಂಸ್ಥೆಗಳನ್ನು ರಕ್ಷಿಸುವಲ್ಲಿ ಮೋದಿಯದು ಶೂನ್ಯ ವಾರಂಟಿ" ಎಂದು ಅವರು ವಾಗ್ದಾಳಿ ನಡೆಸಿದರು.