HEALTH TIPS

ಆಂಧ್ರದಲ್ಲಿ ಅಪರೂಪದ ಮೀನು ಪತ್ತೆ! ಸ್ವಲ್ಪ ಮನುಷ್ಯನಂತೆ ಕಂಡರೂ ತುಂಬಾ ಡೇಂಜರ್​ ಈ ಜೀವಿ

           ವಿಜಯವಾಡ: ಆಂಧ್ರ ಪ್ರದೇಶದ ವಿಶಾಖಪಟ್ಟಣಂ ಸಮುದ್ರದಲ್ಲಿ ಗುರುವಾರ ಮೀನುಗಾರರ ಬಲೆಗೆ ಅಪರೂಪದ ಮೀನು ಸಿಕ್ಕಿದೆ. ಮೀನಿನ ವಿಚಿತ್ರ ರೂಪವನ್ನು ಕಂಡು ಒಂದು ಕ್ಷಣ ಮೀನುಗಾರರೇ ದಂಗಾಗಿದ್ದಾರೆ.

             ಮೀನಿನ ಬಗ್ಗೆ ವಿಶಾಖಪಟ್ಟಣಂನ ಸಹಾಯಕ ಮೀನುಗಾರಿಕಾ ನಿರ್ದೇಶಕ ಡಾ. ಪಿ.

ಶ್ರೀನಿವಾಸ್​ ರಾವ್​ ಮಾಹಿತಿ ನೀಡಿದ್ದು, ಇದು ಪಫ್ಫರ್​ ಫಿಶ್​ ಎಂದು ತಿಳಿಸಿದ್ದಾರೆ. ಆದರೆ, ಸ್ಥಳೀಯ ಮೀನುಗಾರರು ಇದನ್ನು ಸಮುದ್ರ ಕಪ್ಪೆ ಎಂದು ಭಾವಿಸಿದ್ದರು. ಈ ಮೀನು ಸಮುದ್ರದ ಆಳದಲ್ಲಿ ಅಲೆದಾಡುತ್ತವೆ. ಬಲೆಗೆ ಬಿದ್ದಾಗ ಅಥವಾ ಯಾರಾದರು ದಾಳಿ ಮಾಡಿದಂತಹ ಸಂದರ್ಭದಲ್ಲಿ ತಮ್ಮ ದೇಹವನ್ನು ಬಲೂನ್​ ರೀತಿ ಮಾಡಿಕೊಳ್ಳುತ್ತವೆ. ಈ ಮೀನು ನೋಡಲು ಸ್ವಲ್ಪ ಮನುಷ್ಯನ ರೀತಿ ಕಾಣುತ್ತದೆ.

                ಅಂದಹಾಗೆ ಈ ಪಫ್ಪರ್ ಫಿಶ್​ ತುಂಬಾ ವಿಷಕಾರಿ ಮೀನು. ಇತರ ಸಮುದ್ರ ಪ್ರಭೇದಗಳಿಂದ ತನ್ನನ್ನು ರಕ್ಷಿಸಿಕೊಳ್ಳಲು, ಈ ಮೀನಿನ ಯಕೃತ್ತಿನಲ್ಲಿ ಶಕ್ತಿಯುತವಾದ ವಿಷ ಉತ್ಪಾದನೆಯಾಗುತ್ತದೆ. ಈ ವಿಷವು ಸೈನೈಡ್‌ಗಿಂತ 1,000 ಪಟ್ಟು ಹೆಚ್ಚು ಮಾರಕವಾಗಿದೆ. ಇದನ್ನು ಹೆಚ್ಚಾಗಿ ಜಪಾನ್​ ಸೇವನೆ ಮಾಡುತ್ತಾರೆ.

                  ಕೆಲವು ತರಬೇತಿ ಪಡೆದ ಜಪಾನಿನ ಬಾಣಸಿಗರಿಗೆ ಮಾತ್ರ ಈ ಮೀನನ್ನು ಸೂಕ್ಷ್ಮವಾಗಿ ಬೇಯಿಸುವುದು ಹೇಗೆ ಎಂದು ತಿಳಿದಿದೆ ಎಂಬುದು ಗಮನಾರ್ಹ ಸಂಗತಿ. ಅಲ್ಲದೆ, ಈ ಮೀನು ಅಡುಗೆ ಮಾಡಲು ಲೈಸೆನ್ಸ್​ ಸಹ ಪಡೆಯಬೇಕಿದೆ. ಈ ಮೀನು ಖಾದ್ಯ ತಿಂದು ಪ್ರತಿ ವರ್ಷ ನೂರಾರು ಜಪಾನಿಗರು ಸಾಯುತ್ತಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries