ನವದೆಹಲಿ: ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಅವರ ಪತ್ನಿಗೆ ಸೇರಿದ ಕಾರನ್ನು ದೆಹಲಿಯ ಗೋವಿಂದಪುರಿಯಲ್ಲಿ ಕಳ್ಳತನವಾಗಿದೆ ಎನ್ನಲಾಗಿದೆ.
ನವದೆಹಲಿ: ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಅವರ ಪತ್ನಿಗೆ ಸೇರಿದ ಕಾರನ್ನು ದೆಹಲಿಯ ಗೋವಿಂದಪುರಿಯಲ್ಲಿ ಕಳ್ಳತನವಾಗಿದೆ ಎನ್ನಲಾಗಿದೆ.
ಮಾರ್ಚ್ 19ರಂದು ಮಧ್ಯಾಹ್ನ ಈ ಘಟನೆ ನಡೆದಿದೆ ಎಂದು ಉಲ್ಲೇಖಿಸಿ ಎನ್‌ಡಿ ಟಿವಿ ವರದಿ ಮಾಡಿದೆ. ಜೆ.ಪಿ. ನಡ್ಡಾ ಅವರ ಪತ್ನಿಗೆ ಸೇರಿದೆ ಎನ್ನಲಾದ ಟೊಯೊಟಾ ಫಾರ್ಚ್ಯೂನರ್ ಕಾರನ್ನು, ಚಾಲಕ ಗೋವಿಂದಪುರಿಯ ತಮ್ಮ ನಿವಾಸದ ಬಳಿ ನಿಲ್ಲಿಸಿದ್ದರು. ಊಟ ಮುಗಿಸಿ ಬರುವಷ್ಟರಲ್ಲಿ ಕಾರು ಕಳ್ಳತನವಾಗಿದೆ ಎಂದು ವರದಿಯಾಗಿದೆ.
'ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಕದ್ದ ಕಾರು ಗುರುಗ್ರಾಮ ಕಡೆಗೆ ಹೋಗುತ್ತಿರುವುದು ಕಂಡುಬಂದಿದೆ. ಆದರೆ, ಈವರೆಗೂ ಕಾರಿನ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ' ಎಂದು ಪೊಲೀಸರು ತಿಳಿಸಿದ್ದಾರೆ ಎನ್ನಲಾಗಿದೆ.
ಕಳ್ಳತನವಾಗಿರುವ ಟೊಯೊಟಾ ಫಾರ್ಚ್ಯೂನರ್ ಕಾರು ಹಿಮಾಚಲ ಪ್ರದೇಶದ ನೋಂದಣಿ ಸಂಖ್ಯೆ ಹೊಂದಿದೆ.
ಕಳ್ಳತನವಾದ ಕಾರನ್ನು ಪತ್ತೆ ಹಚ್ಚಲು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.