ಉಪ್ಪಳ: ಉಪ್ಪಳ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ನವಗ್ರಹ ಪ್ರತಿಷ್ಠೆ, ಅಷ್ಟೋತ್ತರ ನವಗ್ರಹ ಯಾಗ, 18ನೇ ವರ್ಷದ ಅಖಂಡ ಭಜನಾ ಸಪ್ತಾಹ ಮಾ. 24ರಂದು ಜರುಗಲಿದೆ.
ಉಪ್ಪಳ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ನೇತೃತ್ವದಲ್ಲಿ ನಡೆಯುವ ಯಾಗ ಕಾರ್ಯಕ್ರಮದಲ್ಲಿ ಕಟೀಲು ಕ್ಷೇತ್ರದ ಅನುವಂಶಿಕ ಪ್ರಧಾನ ಅರ್ಚಕ ಬ್ರಹ್ಮಶ್ರೀ ಅನಂತಪದ್ಮನಾಭ ಆಸ್ರಣ್ಣ, ಬ್ರಹ್ಮಶ್ರೀ ಕಮಲಾದೇವಿ ಆಸ್ರಣ್ಣ ದಿವ್ಯ ಉಪಸ್ಥಿತಿ ವಹಿಸುವರು. ಕಾರ್ಯಕ್ರಮದ ಅಂಗವಾಗಿ ಮಾ. 23ರಂದು ಸಂಜೆ 4.30ಕ್ಕೆ ಉಪ್ಪಳ ಪೇಟೆಯಿಂದ ಆಶ್ರಮಕ್ಕೆ ಹಸಿರುವಾಣಿ ಸಮರ್ಪಣಾ ಮೆರವಣಿಗೆ, ಸಂಜೆ 6ಕ್ಕೆ ವೈದಿಕ ಕಾರ್ಯಕ್ರಮ ನಡೆಯುವುದು. 24ರಂದು ಬೆಳಗ್ಗೆ 6ಕ್ಕೆ ಪ್ರಾರ್ಥನೆ, ಪುಣ್ಯಾಹ ವಾಚನ, ಆಚಾರ್ಯವರಣ, 7.30ಕ್ಕೆ ಅಷ್ಟೋತ್ತರ ಸಹಸ್ರ ನವಗ್ರಹ ಯಾಗ ಆರಂಭ, 9.50ಕ್ಕೆ ನವಗ್ರಹ ಪ್ರತಿಷ್ಠೆ ನಡೆಯುವುದು. 10.30ಕ್ಕೆ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ, ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸವಾಮೀಜಿ, ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸವಾಮೀಜಿ, ಶ್ರೀಕ್ಷೇತ್ರ ಕರಿಂಜೆ ಶ್ರೀ ಮುಕ್ತಾನಂದ ಸ್ವಾಮೀಜಿ ಅವರಿಗೆ ಪೂರ್ಣಕುಂಭ ಸ್ವಾಗತ, 11.30ಕ್ಕೆ ನವಗ್ರಹ ಯಾಗದ ಪೂರ್ಣಾಹುತಿ ನಡೆಯುವುದು. ಮಧ್ಯಾಹ್ನ 2.30ಕ್ಕೆ ಆಳ್ವಾಸ್ ಸಾಂಸ್ಕøತಿಕ ವೈಭವ ನಡೆಯುವುದು. ಸಂಜೆ 6.30ಕ್ಕೆ ನಡೆಯುವ ಭಜನಾ ಸಪ್ತಾಹಕ್ಕೆ ಸ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ದೀಪ ಪ್ರಜ್ವಲನೆ ನಡೆಸುವರು. ನಂತರ ನಕ್ಷತ್ರ ವನದಲ್ಲಿ ದೀಪೋತ್ಸವ ನಡೆಯುವುದು. ಮಾ. 31ರಂದು ಭಜನಾಸಪ್ತಾಹದ ಮಹಾಮಂಗಳಾಚರಣೆ ನಡೆಯುವುದು.