ಚೆನ್ನೈ: ದಕ್ಷಿಣ ಭಾರತದ ಕರ್ನಾಟಕ ಶಾಸ್ತ್ರೀಯ ಸಂಗೀತದ ಖ್ಯಾತ ಗಾಯಕಿ ಸೋದರಿಯರಾದ ರಂಜನಿ ಮತ್ತು ಗಾಯತ್ರಿ ಅವರು ಮ್ಯೂಸಿಕ್ ಅಕಾಡೆಮಿ ಆಡಳಿತದೊಳಗೆ ಒಳಗೆ ಬದಲಾವಣೆ ಆಗಬೇಕಿದೆ ಎಂದು ಬಹಿರಂಗವಾಗಿ ತಮ್ಮ ಅಭಿಪ್ರಾಯ ಹೇಳಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ. ಬ್ರಾಹ್ಮಣರು ಮತ್ತು ರಾಜಮನೆತನದವರನ್ನು ಮಾತ್ರ ಒಳಗೊಂಡಿರುವ ಅದರ ಭದ್ರವಾದ ಕಾರ್ಯಕಾರಿ ಸಮಿತಿಯಲ್ಲಿ ಬದಲಾವಣೆಯಾಗಬೇಕು ಎಂದು ಹೇಳಿದ್ದಾರೆ.
ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿರುವ ಅವರು, ಗಾಯಕ ಟಿಎಂ ಕೃಷ್ಣ ಅವರಿಗೆ ಸಂಗೀತ ಕಲಾನಿಧಿ ಪ್ರಶಸ್ತಿ ನೀಡಿರುವ ಕುರಿತು ನಡೆಯುತ್ತಿರುವ ವಿವಾದಕ್ಕೆ ಸಂಬಂಧಿಸಿದಂತೆ ಮ್ಯೂಸಿಕ್ ಅಕಾಡೆಮಿಯ ಅಧ್ಯಕ್ಷ ಎನ್ ಮುರಳಿ ಅವರ ಬಗ್ಗೆ ಗಾಯಕಿಯರು ಪ್ರತಿಕ್ರಿಯಿಸಿದ್ದಾರೆ, 'ಸರಳ ನಿರ್ಣಯ ಮತ್ತು ಹಲವರ ರಾಜೀನಾಮೆಯಿಂದ ಅಕಾಡೆಮಿಯಲ್ಲಿ ರೂಪಾಂತರವನ್ನು ತಕ್ಷಣವೇ ಸಾಧಿಸಬಹುದು ಎಂದು ಹೇಳಿದ್ದಾರೆ.
ಮುರಳಿ ಅವರು ಕಳೆದ ಎರಡು ದಶಕಗಳಿಂದ ಅಕಾಡೆಮಿಯನ್ನು ಮುನ್ನಡೆಸುತ್ತಿದ್ದಾರೆ ಎಂದು ಗಮನಸೆಳೆದ ಇಬ್ಬರೂ, 'ಉದಾಹರಣೆಯಿಂದ ಒಂದು ಸಂಸ್ಥೆಯನ್ನು ಮುನ್ನಡೆಸುವುದನ್ನು ಪರಿಗಣಿಸಬೇಕು, ಜಗತ್ತು ಇದನ್ನು ಕೇವಲ ಬಾಯಿಮಾತು ಎಂದು ಕರೆಯಬಾರದು' ಎಂದು ಹೇಳಿ ಮುರಳಿಯವರು ತಕ್ಷಣವೇ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಎಲ್ಲಾ ಸಮುದಾಯಗಳು ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ವೈವಿಧ್ಯಮಯ ಜನಸಮೂಹದ ಉಪಸ್ಥಿತಿಯಲ್ಲಿ ಸಂಗೀತ ಅಕಾಡೆಮಿಯಲ್ಲಿ ಸಮಾಜದ ಕೆಳಹಂತದಿಂದ ಬಂದ ಸ್ಟಾರ್ ಕಲಾವಿದರು ಮ್ಯೂಸಿಕ್ ಅಕಾಡೆಮಿಯನ್ನು ಮುನ್ನಡೆಸುವುದನ್ನು ನೋಡಲು ಬಯಸುತ್ತೇವೆ ಎಂದಿದ್ದಾರೆ.
ಅಧ್ಯಕ್ಷ ಮುರಳಿ ಅವರು ಅವರ ಅನುಕೂಲಕ್ಕೆ ತಕ್ಕಂತೆ ಮಾತನಾಡುತ್ತಿದ್ದಾರೆ. ಅವರ ಮೇಲೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಹಿರಿಯ ಪತ್ರಕರ್ತ ಎನ್ ರಾಮ್ ಅವರನ್ನೂ ಇಲ್ಲಿ ಗಾಯಕಿಯರು ಟೀಕಿಸಿದ್ದಾರೆ. ರಾಮ್ ಅಘೋಷಿತ ವಕ್ತಾರರು ಎಂದು ಟೀಕಿಸಿದ್ದಾರೆ.
ಮದ್ರಾಸ್ ಮ್ಯೂಸಿಕ್ ಅಕಾಡೆಮಿಯು 2024 ರ ತಮ್ಮ ಪ್ರತಿಷ್ಠಿತ ಸಂಗೀತ ಕಲಾನಿಧಿ ಪ್ರಶಸ್ತಿಯನ್ನು ಕೃಷ್ಣ ಅವರಿಗೆ ನೀಡಿದ್ದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ಕೆಲವು ಕರ್ನಾಟಕ ಸಂಗೀತ ಕಲಾವಿದರು ಪ್ರತಿಭಟಿಸಿ ಅಕಾಡೆಮಿಯ ವಾರ್ಷಿಕ ಡಿಸೆಂಬರ್ ಸಮ್ಮೇಳನದಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ.
ಭಾಗವಹಿಸದಿರಲು ನಿರ್ಧರಿಸಿದವರಲ್ಲಿ ರಂಜನಿ ಮತ್ತು ಗಾಯತ್ರಿ ಸೋದರಿಯರು ಕೂಡ ಸೇರಿದ್ದಾರೆ, ಟಿಎಂ ಕೃಷ್ಣ ಅವರ ಅಧ್ಯಕ್ಷತೆಯಲ್ಲಿ ಈ ವರ್ಷದ ಸಮ್ಮೇಳನದಲ್ಲಿ ಭಾಗವಹಿಸುವುದು "ನೈತಿಕ ಉಲ್ಲಂಘನೆ" ಎಂದು ಪ್ರತಿಪಾದಿಸಿದ್ದಾರೆ. ಕೃಷ್ಣ ಅವರು "ಉದ್ದೇಶಪೂರ್ವಕವಾಗಿ ಮತ್ತು ವೈಯಕ್ತಿಕ ಸಂತೋಷಕ್ಕೆ" ಸಮುದಾಯದ ಭಾವನೆಗಳನ್ನು ತುಳಿಯುವ ಮೂಲಕ ಕರ್ನಾಟಕ ಸಂಗೀತ ಲೋಕಕ್ಕೆ ಅಪಾರ ಹಾನಿ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.